×
Ad

ಆಟೋ ಪಲ್ಟಿ: ಮಹಿಳೆ ಮೃತ್ಯು

Update: 2017-06-28 15:45 IST

ಚಿಕ್ಕಮಗಳೂರು, ಜೂ.28: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಸಿಂಗಟಗೆರೆ ಬಳಿಯ ಹನುಮನಹಳ್ಳಿ-ಸೋಮನಹಳ್ಳಿ ಮದ್ಯೆ ನಡೆದಿದೆ.

ಮೃತ ಮಹಿಳೆಯನ್ನು ಮಡಿಕೇರಿಯ ಹೆಬ್ಬಾಲೆ ಗ್ರಾಮದ ಗೌರಮ್ಮ(65) ಎಂದು ಗುರುತಿಸಲಾಗಿದೆ. ಇವರು ಸಂಬಂಧಿಕರ ಮನೆಗೆ ತೆರಳಿ ಅಂತ್ಯಸಂಸ್ಕಾರವೊಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಆಟೋ ರಿಕ್ಷಾ ಚಾಲಕನ ಅಜಾಗರೂಕತೆಯ ಪರಿಣಾಮ ಪಲ್ಟಿಯಾಗಿದೆ. ಈ ಸಮಯಲ್ಲಿ ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News