ಹನೂರು: ಕೆಂಪೇಗೌಡರ ಜನ್ಮದಿನಾಚರಣೆ
ಹನೂರು, ಜೂ.28: ಪಟ್ಟಣದ ಒಕ್ಕಲಿಗರ ಯುವ ಸಮಿತಿ ವತಿಯಿಂದ ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆಯನ್ನು ಆಚರಿಸಲಾ ಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಂಪೇಗೌಡರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮಾತನಾಡಿದ ಮುಂಖಡರಾದ ಶಂಕರೇಗೌಡ ಡೈರಿ ನಮ್ಮ ನಾಡು ಕಂಡ ಅಪ್ರತಿಮ ನಾಯಕ ನಮ್ಮ ಕೆಂಪೆಗೌಡರಾಗಿದ್ದರು. ಸರ್ವ ಜನರ ಅಭಿವೃದ್ದಿಯ ಚಿಂತನೆ ಅವರಿಲ್ಲಿತ್ತು ಅವರ ಮುಂದಾಲೋಚನೆ ಹಾಗೂ ಬಡ ಜನರ ಬಗೆಗಿನ ಚಿಂತನೆ ಇಂದಿನ ಯುವ ಪಿಳಿಗೆ ಮಾರ್ಗದರ್ಶವಾಗಿದೆ ಎಂದು ತಿಳಿಸಿದರು.
ಹನೂರು ಪಟ್ಟಣದಲ್ಲಿ ನಮ್ಮ ಯುವಕ ಸಮಿತಿಯ ಸಮ್ಮುಖದಲ್ಲಿ ಸತತವಾಗಿ ಎರಡನೇ ಬಾರಿ ಕಾರ್ಯಕ್ರಮ ನೆಡೆಯುತ್ತಿರುವುದು ನಮ್ಮಲ್ಲರಿಗೂ ಸಂತಸ ತಂದಿದೆ. ನಮ್ಮ ಸರ್ಕಾರದ ವತಿಯಿಂದ ಶ್ರೀ ನಾಡ ಪ್ರಭು ಕೆಂಪೇಗೌಡರವರ ಜಯಂತಿ ಮಾಡುತ್ತಿರುವುದು ತಂಬಾ ಸಂತಸ ತಂದಿದೆ. ಹಾಗೂ ಅದೇ ರೀತಿ ಇಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಇನ್ನು ಹೆಚ್ಚಿನ ಯವಕರು ಸೇರಿ ಮುಂದಿನ ವರ್ಷದಿಂದ ಎಲ್ಲರೂ ಒಗ್ಗೂಡಿ ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಒಕ್ಕಲಿಗ ಯುವ ಸಮಿತಿಯ ವತಿಯಿಂದ ಮಜ್ಜಿಗೆ, ಸಿಹಿ ವಿತರಣೆ: ಹನೂರು ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡರ ಶುಭಾಶಯದ ನಾಮಫಲಕಗಳನ್ನು ಹಾಕಿದ್ದರು. ಖಾಸಗಿ ಬಸ್ ನಿಲ್ದಾಣದಲ್ಲಿ ಮಜ್ಜಿಗೆ, ಸಿಹಿತಿಂಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹನೂರು ಒಕ್ಕಲಿಗರ ಯುವ ಸಮಿತಿ ಪದಾಧಿಕಾರಿಗಳಾದ ಅಭಿಲಾಷ್ ಗೌಡ, ಪ್ರವೀಣ್ ಕುಮಾರ್ ಆಶೋಕ್ ಸಂತೋಷ್ ಮಹೇಶ್ (ಮಲ್ಲ), ಮಂಜು, ಗಿರೀಶ್, ರಾಜೇಂದ್ರ, ಮಂಜು, ಅಶ್ವಿನ್, ಚೇತನ್, ಪೇಪರ್‌ವಿಜಿ, ಸಂತೋಷ್ ಮಹೇಂದ್ರ, ಪೇಪರ್‌ವಿಜಿ, ಮಹೇಂದ್ರ, ನಟರಾಜು, ಸುರೇಶ್, ಮರಿಗೌಡ್ರು ಅತ್ತರಾಳಿ, ರಾಮೇಗೌಡ, ಮಹೇಶ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.