‘ನನ್ನ ಹೆಸರಲ್ಲಿ ಬೇಡ’
Update: 2017-06-29 17:28 IST
ಇತ್ತೀಚೆಗೆ ರೈಲಿನಲ್ಲಿ ಹರ್ಯಾಣದ ಬಾಲಕ ಜುನೈದ್ ಹತ್ಯೆಯಾದ ಘಟನೆ ಸೇರಿದಂತೆ ದೇಶಾದ್ಯಂತ ಮುಸ್ಲಿಮರು ಹಾಗೂ ದುರ್ಬಲ ವರ್ಗಗಳ ಮೇಲೆ ಸಂಘಪರಿವಾರದ ಬೆಂಬಲಿಗರಿಂದ ನಡೆಯುತ್ತಿರುವ ಹಲ್ಲೆ, ಹತ್ಯೆಗಳನ್ನು ಖಂಡಿಸಿ ಬೆಂಗಳೂರು, ದಿಲ್ಲಿ, ಕೋಲ್ಕತ ಮುಂಬೈ, ಹೈದರಾಬಾದ್, ತಿರುವನಂತಪುರಂಗಳಲ್ಲಿ ‘ನನ್ನ ಹೆಸರಲ್ಲಿ ಬೇಡ’ ಪ್ರತಿಭಟನೆ ನಡೆದಿದ್ದು, ಸಾವಿರಾರು ಪ್ರತಿಭಟನಾಕಾರರು ಪಾಲ್ಗೊಂಡರು. ಬೆಂಗಳೂರಿನ ಪುರಭವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ, ಸಾಹಿತಿ ಗಿರೀಶ್ ಕಾರ್ನಾಡ್ ಪಾಲ್ಗೊಂಡರು. ಹೊಸದಿಲ್ಲಿ, ಹಾಗೂ ಬೆಂಗಳೂರಿನಲ್ಲಿ ಈ ನಾಗರಿಕ ಪ್ರತಿಭಟನೆ ನಡೆಯಿತು. ಹರ್ಯಾಣದಲ್ಲಿ ರೈಲಿನಲ್ಲಿ ಮುಸ್ಲಿಂ ಯುವಕನನ್ನು ಥಳಿಸಿ ಹತ್ಯೆ ನಡೆಸಿರುವುದನ್ನು ವಿರೋಧಿಸಿ ಚಿತ್ರ ನಿರ್ಮಾಣಕಾರ ಸಬಾ ದೀವಾನ್ ಫೇಸ್‌ಬುಕ್ ಅಭಿಯಾನ ಆರಂಭಿಸಿದ್ದರು ಹಾಗೂ ಜೂ.28ರಂದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕರೆನೀಡಿದ್ದರು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.