ಓಮ್ನಿ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2017-06-29 22:51 IST
ಮಂಡ್ಯ, ಜೂ.29: ಓಮ್ನಿ ವಾಹನ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೃಷ್ಣರಾಜಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಕೃಷ್ಣರಾಜಪೇಟೆ ತಾಲೂಕಿನ ದೊಡ್ಡಗಾಡಿಗನಹಳ್ಳಿ ಗ್ರಾಮದ ರಾಜೇಗೌಡ ಅವರ ಪುತ್ರ ಡಿ.ಆರ್.ಸುನಿಲ್ (23) ಸಾವನ್ನಪ್ಪಿದ ಯುವಕನಾಗಿದ್ದು, ಓಮ್ನಿ ವಾಹನದಲ್ಲಿದ್ದ ಸಿಂಧಘಟ್ಟ ಗ್ರಾಮದ ವೆಂಕಟೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರ್ಯನಿಮಿತ್ರ ಪಟ್ಟಣಕ್ಕೆ ಆಗಮಿಸಿದ್ದ ಸುನಿಲ್ ವಾಪಸ್ ಗ್ರಾಮಕ್ಕೆ ತೆರಳುವಾಗ ಎದುರಿನಿಂದ ಬರುತ್ತಿದ್ದ ಓಮ್ನಿ ಢಿಕ್ಕಿಯೊಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸರು ತಿಳಿಸಿದ್ದಾರೆ.