×
Ad

​ಅಧಿಕಾರಿಗಳು ಜನಪರವಾಗಿ ಕರ್ತವ್ಯ ನಿರ್ವಹಿಸುವಂತೆ ಒತ್ತಾಯಿಸಿ ಪ್ರತಿಭಟನೆ

Update: 2017-06-30 17:47 IST

ಮೂಡಿಗೆರೆ, ಜೂ.30: ತಾಲೂಕು ಕಚೇರಿಯಲ್ಲಿ ರೈತರ ಮತ್ತು ಜನಸಾಮಾನ್ಯರ ಯಾವ ಕೆಲಸವೂ ಆಗುತ್ತಿಲ್ಲ. ಅಧಿಕಾರಿಗಳು ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥ್‌ಗೌಡ ಆರೋಪಿಸಿದರು.

ಅವರು ಶುಕ್ರವಾರ ತಾಲೂಕು ಕಚೇರಿ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಎದುರು ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸರಕಾರ ಕಚೇರಿ ಕಾರ್ಯವಿಧಾನ ಕೈಪಿಡಿ 2005ರನ್ನು ರಚಿಸಿ ಕಚೇರಿಯಲ್ಲಿ ಅಧಿಕಾರಿಗಳು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ರೂಪಿಸಿದೆ. ವಿಷಯ ನಿರ್ವಾಹಕರು ಮತ್ತು ಆದೇಶ ಮಾಡುವ ಅಧಿಕಾರಿಗಳು 15 ದಿನಗಳ ಮೇಲೆ ಕಡತವನ್ನು ಇಟ್ಟುಕೊಳ್ಳಬಾರದೆಂಬ ನಿಯಮವಿದೆ. ಆದರೆ ಇಲ್ಲಿ ಅಧಿಕಾರಿಗಳದ್ದೇ ಕಾನೂನಾಗಿಬಿಟ್ಟಿದೆ. ಇಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಅತೀ ಗಂಭೀರ ಸಮಸ್ಯೆಗಳಾದ ಶಾಲಾವನ, ಒತ್ತುವರಿ, ದಾರಿ ರಸ್ತೆ ಒತ್ತುವರಿ ಸಮಸ್ಯೆಗಳನ್ನು ತಾಲೂಕು ಕಚೇರಿಯಲ್ಲಿ ಕಡತಗಳೆ ಇಲ್ಲವೆಂದು ಸಮಸ್ಯೆ ಬಗೆಹರಿಸದೇ ವಿಳಂಬ ಮಾಡುತ್ತಿದ್ದಾರೆ. ಬಡವನದಿಣ್ಣೆ ಹರಿಜನರ ಮಶಾಣ ಒತ್ತುವರಿಯಾಗಿದೆ ಅದನ್ನು ಕೂಡಲೇ ಬಿಡಿಸಿಕೊಡಬೇಕು ಎಂದ ಅವರು, ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
 
 ಬಳಿಕ ತಹಸೀಲ್ದಾರರರಿಗೆ ಮನವಿ ಸಲ್ಲಿಸಲಾಯಿತು.  ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಮುಖಂಡರಾದ ಬಿ.ಎಸ್.ಲಕ್ಷ್ಮಣ್‌ಗೌಡ, ಚಂದ್ರೇಗೌಡ, ಹಳೆಕೆರೆ ರಘು, ಹೊನ್ನೆಕೋಯ್ಲು ಮಂಜುನಾಥ್‌ಗೌಡ, ಬಿ.ಎಸ್.ರಮೇಶ್, ಲಿಂಗರಾಜು, ಗಣೇಶ್, ಪ್ರಜ್ವಲ್ ಮತ್ತಿತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News