×
Ad

ಕರಡಿಗೋಡು ಕಾವೇರಿ ನದಿ ದಡದ ತಡೆಗೋಡೆ ಕುಸಿತ : ಸ್ಥಳಕ್ಕೆ ಅಧಿಕಾರಿಗಳ ಭೇಟಿ

Update: 2017-06-30 18:06 IST

ಮಡಿಕೇರಿ, ಜೂ.30:ಸಿದ್ದಾಪುರ ಸುತ್ತಮುತ್ತ ಸುರಿಯುತ್ತಿರುವ ಮಳೆಗೆ ಕರಡಿಗೋಡು ಕಾವೇರಿ ನದಿದಡದ ಚಿಕ್ಕನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಡೆಗೋಡೆ ಕುಸಿತಗೊಂಡಿದ್ದು, ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಡೆಗೋಡೆ ಕುಸಿತಗೊಂಡು ರಸ್ತೆ ಬಿರುಕು ಕಾಣಿಕೊಂಡಿರುವದರಿಂದ ರಸ್ತೆ ಸಂಚಾರ ಸ್ಥಗಿತಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೂಚನೆ ನೀಡಿದರು.

ಗ್ರಾ.ಪಂಅಧ್ಯಕ್ಷರಾದಎಂ.ಕೆ.ಮಣಿ ಮಾತನಾಡಿ ಮಳೆಗೆ ತಡೆಗೋಡೆ ಕುಸಿತದಿಂದ ಕರಡಿಗೊಡು-ಚಿಕ್ಕನಳ್ಳಿ ರಸ್ತೆ ಸಂಪರ್ಕ ಕಡಿತ ಸಾಧ್ಯತೆ ಇದೆ. ರಸ್ತೆ ಬಿರುಕು ಕಾಣಿಸಿಕೊಂಡಿದ್ದು,ಮನೆಗಳಿಗೂ ಹಾನಿಯಾಗಲಿದೆ. ತಕ್ಷಣ ತಡೆಗೋಡೆ  ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.   ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಭರವಸೆ ನೀಡಿದರು.

ಪಿಡಬ್ಲ್ಯೂಡಿ ಇಂಜಿನಿಯರ್ಸುರೇಶ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್ಪೂಣಚ್ಚ, ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್,ಗ್ರಾಮಲೆಕ್ಕಿಗರಾದ ಮಂಜುನಾಥ್, ಸಹಾಯಕ ಕೃಷ್ಣ ಸೇರಿದಂತೆ ಮತ್ತಿತರರು ಈ ಸಂದಭರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News