×
Ad

ವ್ಯವಸ್ಥಿತ 122 ಅಂಗಡಿ ನಿರ್ಮಾಣ: ಹೆಚ್.ಎಸ್. ಪ್ರಕಾಶ್

Update: 2017-06-30 22:06 IST

ಹಾಸನ, ಜೂ.30: ನಗರದ ಹೃದಯ ಭಾಗದಲ್ಲಿರುವ ಕಟ್ಟಿನಕೆರೆ ಮಾರ್ಕೇಟ್ ನೂತನವಾಗಿ ನಿರ್ಮಾಣಗೊಳ್ಳುವ ವ್ಯವಸ್ಥಿತ 122 ಅಂಗಡಿ ನಿರ್ಮಾಣದ ಕಟ್ಟಡ ಕಾಮಗಾರಿಗೆ ಕ್ಷೇತ್ರದ ಶಾಸಕ ಹೆಚ್.ಎಸ್. ಪ್ರಕಾಶ್ ಚಾಲನೆ ನೀಡಿದರು.

ನಂತರ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ವ್ಯಾಪಾರ ಮಾಡುವವರಿಗೆ ವ್ಯವಸ್ಥಿತವಾಗಿ ಎಲ್ಲರಿಗೂ ಅನುಕೂಲವಾಗುವ ಉತ್ತಮ ರೀತಿಯಲ್ಲಿ ಇರುವ ಜಾಗದಲ್ಲೆ ಅಂಗಡಿಯನ್ನು ನಿರ್ಮಿಸಿಕೊಡಲಾಗುವುದು. ಅಂದು ಕಟ್ಟಿನಕೆರೆ ಮಾರ್ಕೇಟ್ ಅಧ್ಯಕ್ಷರಾಗಿದ್ದ ಜಿ.ಟಿ. ಗೌಡ ಅವರು ವ್ಯಾಪಾರ ಮಾಡಲು ಸ್ಥಳಾವಕಾಶ ಕೇಳಿ ಮನವಿ ಮಾಡಿದ್ದರಿಂದ ಲಾಟರಿ ಮೂಲಕ ಜಾಗ ನೀಡಲಾಗಿತ್ತು. ಇಂದು ಇದೇ ಮಾರ್ಕೇಟನ್ನು ಆಧುನಿಕ ರೀತಿಯಲ್ಲಿ ನಿರ್ಮಿಸಲು ಮುಂದಾಗಿದ್ದೇವೆ.

ಒಟ್ಟು 122 ಮಳಿಗೆಗಳನ್ನು ನಿರ್ಮಿಸಲಾಗುವುದು. ಕಟ್ಟಡ ಸಂಪೂರ್ಣ ನಿರ್ಮಾಣವಾಗುವವರಿಗೂ ವ್ಯಾಪಾರಸ್ತರು ಸಹಕರಿಸಬೇಕು. ತರಕಾರಿ ಹಾಗೂ ವಿವಿಧ ವ್ಯಾಪಾರ ಮಾಡುವವರು ವೇಸ್ಟ್ ಹಸಿ ಪದಾರ್ಥವನ್ನು ಎಲ್ಲೆಂದರಲ್ಲಿ ಎಸೆಯದೆ, ಒಂದು ಕಡೆ ಹಾಕಿದರೇ ಉತ್ತಮ ಗೊಬ್ಬರವಾಗಬಹುದು. ಇದನ್ನು ರೈತರು ತಮ್ಮ ಬೆಳೆಗೆ ಹಾಕಿದರೇ ಉತ್ತಮ ಬೆಳೆ ಬರುತ್ತದೆ ಎಂದು ಕಿವಿಮಾತು ಹೇಳಿದರು.

ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ತರಿಗೆ ಸೇರಿ ಒಳ್ಳೆಯ ಶೌಚಾಲಯ ನಿರ್ಮಿಸಲಾಗುವುದು. ನೂತನ ಮಳಿಗೆಗಳು ನಿರ್ಮಾಣವಾದ ಮೇಲೆ ಮೊದಲು ಇದ್ದ ಜಾಗದಲ್ಲಿ ಇರುವವರಿಗೆ ಅದೆ ಮಳಿಗೆ ನೀಡಲಾಗುತ್ತದೆ. ಆಗೇ ಸುಂಕ ಇಲ್ಲವೇ ಮಳಿಗೆ ಬಾಡಿಗೆ ಯಾವುದಾದರೂ ಒಂದನ್ನು ಪಡೆಯಲು ನಿರ್ಧರಿಸಲಾಗುವುದು ಎಂದು ಹೇಳಿದರು. ಹೂವಿನ ಮಾರಾಟ, ಬಾಳೆಹಣ್ಣು, ತರಕಾರಿ, ಹಣ್ಣು ವ್ಯಾಪಾರ ಎಲ್ಲಾವನ್ನು ಒಂದೊಂದು ಬಗೆಯ ವ್ಯಾಪಾರವನ್ನು ಒಂದು ಕಡೆ ಮಾರಟ ಮಾಡುವ ವ್ಯವಸ್ಥೆ ಮಾಡುವುದಾಗಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಮಹೇಶ್, ಪ್ರಕಾಶ್, ಹಣ್ಣಿನ ವ್ಯಾಪಾರ ಸಂಘದ ಅಧ್ಯಕ್ಷ ಪ್ರಶಾಂತ್, ಕಟ್ಟಿನಕೆರೆ ಮಾರ್ಕೇಟ್ ಸಂಘದ ಅಧ್ಯಕ್ಷ ಆನಂದ್, ತರಕಾರಿ ಸಂಘದ ಉಪಾಧ್ಯಕ್ಷ ರಂಗಣ್ಣ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News