×
Ad

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಪ್ರಥಮ ಚುನಾವಣೆ : ಕಾಂಗ್ರೆಸ್ ಅಧಿಕಾರಕ್ಕೆ

Update: 2017-07-01 19:21 IST

ಚಾಮರಾಜನಗರ, ಜು.1: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟಕ್ಕೆ ಪ್ರಪ್ರಥಮವಾಗಿ ನಡೆದ  ಆಡಳಿತ ಮಂಡಳಿಯ 8 ಸ್ಥಾನಗಳಲ್ಲಿ ಕಾಂಗ್ರೆಸ್ 6ರಲ್ಲಿ  ಹಾಗೂ  ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಲಾ ಒಂದರಲ್ಲಿ ಗೆಲುವು ಸಾಧಿಸಿದೆ.

ತಾಲೂಕಿನ ಕುದೇರಿನ ಹಾಲು ಒಕ್ಕೂಟದ ಕಚೇರಿಯಲ್ಲಿ  ಶುಕ್ರವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಚುನಾವಣೆ ಮತದಾನ ನಡೆಯಿತು.

ಕಾಂಗ್ರೆಸ್ ಪಕ್ಷದಿಂದ ಸಿ.ಎಸ್. ಗುರುಮಲ್ಲಪ್ಪ, ಎಂ. ನಂಜುಂಡಸ್ವಾಮಿ, ಎಚ್.ಎಸ್. ನಂಜುಂಡಪ್ರಸಾದ್, ಡಿ. ಮಾದಪ್ಪ, ಕೆ.ಎಂ. ಮಾದಪ್ಪ, ಪ್ರಮೋದ ಶಂಕರಮೂರ್ತಿ ಆಯ್ಕೆಯಾದರೆ, ಬಿಜೆಪಿಯಿಂದ ಎಂ.ಎಸ್. ರವಿಶಂಕರ್ ಹಾಗೂ ಪಕ್ಷೇತರ ಕೆ.ಬಿ.ಬಸವರಾಜು, ಗೆಲುವು ಸಾಧಿಸಿದರು.

ಚಾ.ನಗರ ತಾಲೂಕು : ಪಕ್ಷೇತರ ಅಭ್ಯರ್ಥಿ ಕೆ.ಆರ್. ಬಸವರಾಜು 77 ಮತಗಳನು ಪಡೆದು ಗೆಲುವು ಸಾಧಿಸಿದರೆ,  ಬಿಜೆಪಿಯ ಎಂ.ಎಸ್. ರವಿಶಂಕರ್ 48 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ನ ಎಚ್.ಎಸ್. ಬಸವರಾಜು 46 ಮತಗಳು, ಕೋಡಿಮೋಳೆ ರಾಜಶೇಖರ್ 32 ಮತಗಳು, ಬಿಜೆಪಿ ಪು. ಶ್ರೀನಿವಾಸನಾಯಕ 12 ಮತಗಳು ಹಾಗೂ ಎಂ. ಶಿವರಾಮು 2 ಮತಗಳನ್ನು ಪಡೆದು ಪರಾಭವಗೊಂಡರು.

ಗುಂಡ್ಲುಪೇಟೆ ತಾಲೂಕು : ಕಾಂಗ್ರೆಸ್ ಪಕ್ಷದ ಎಚ್. ಎಸ್. ನಂಜುಂಡಪ್ರಸಾದ್ 72 ಮತಗಳು, ಡಿ. ಮಾದಪ್ಪ 64 ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿ ಕೆ.ಎಂ. ನಾಗಮಲ್ಲಪ್ಪ 20 ಮತಗಳು, ಪಿ.ಕೆ. ಮಹದೇವಪ್ಪ  36 ಮತಗಳು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವೈ.ಎನ್. ರಾಜಶೇಖರ್ 32 ಮತಗ ನ್ನು ಪಡೆದು ಸೋಲು ಕಂಡರು.

ಕೊಳ್ಳೇಗಾಲ ತಾಲೂಕು :  ಕಾಂಗ್ರೆಸ್ ಪಕ್ಷದ ಸಿ.ಎಸ್. ಗುರುಮಲ್ಲಪ್ಪ 84 ಮತಗಳು, ಎಂ. ನಂಜುಂಡಸ್ವಾಮಿ 45 ಮತಗಳನ್ನು ಪಡೆದು ಜಯಗಳಿಸಿದರು. ಬಿಜೆಪಿಯು ಎಸ್. ನಟೇಶ್, 13 ಮತಗಳು,  ಎಂ.ಪುಟ್ಟಣ್ಣ 36 ಮತಗಳು ಹಾಗೂ  ಎಸ್. ಮಹದೇವಸ್ವಾಮಿ 30 ಮತಗಳನ್ನು ಪಡೆದು ಪರಾಭವಗೊಂಡರು. ಯಳಂದೂರು ತಾಲೂಕು : ಕಾಂಗ್ರೆಸ್ ಪಕ್ಷದ ಕೆ.ಎಂ. ಮಾದಪ್ಪ 8 ಮತಗಳನ್ನು ಪಡೆದು ಜಯಗಳಿಸಿದರೆ, ಎಚ್.ಎಂ. ಪುಟ್ಟಮಲ್ಲಪ್ಪ ಹಾಗೂ ಎಂ. ಶಿವಾನಂದಸ್ವಾಮಿ ತಲಾ  3 ಮತಗಳನ್ನು ಪೆದು ಸೋಲು ಕಂಡರು.

ಮಹಿಳಾ ಮೀಸಲು ಕ್ಷೇತ್ರ :  ಕಾಂಗ್ರೆಸ್‌ನ ಪ್ರಮೋದಶಿವಶಂಕರಮೂರ್ತಿ 41 ಮತಗಳನ್ನು ಪಡೆದು ಜಯಗಳಿಸಿದರೆ, ವಿಮಲ ಶಂಕರ್ 28 ಮತಗಳು, ಬಿಜೆಪಿಯ ಆರ್. ಶೀಲಾರತ್ನ 18 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಣಾಧಿಕಾರಿಯಾಗಿದ್ದ ಎಂ.ಎನ್. ಮುರುಳೇಶ್, ತಹಶೀಲ್ದಾರ್ ಪುರಂದಾರ್, ಸಹಾಯಕ ನಿಬಂಧರಕರಾದ ಸುಬ್ರಮಣ್ಯ, ಅಧಿಕಾರಿಗಳಾದ ಪ್ರಕಾಶ್ ರಾವ್, ದಯಾನಂದ, ಸಂದೀಪ್, ವಿಮಲ್ ಅವರು ಚುನಾವಣಾ ಮತದಾನ, ಮತ ಎಣಿಕೆ ಕರ್ತವ್ಯಗಳನ್ನು ನಿರ್ವಹಣೆ ಮಾಡಿದರು. ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News