×
Ad

ಜೆಎಸ್‌ಟಿ ಕಾರ್ಯಕ್ರಮ ಬಹಿಷ್ಕರಿಸಿರುವುದು ಸುಧಾರಣಾ ವಿರೋಧಿ ಮನಸ್ಥಿತಿ: ಸಿ.ಟಿ.ರವಿ

Update: 2017-07-01 19:55 IST

ಚಿಕ್ಕಮಗಳೂರು, ಜು.1:ದೇಶದಲ್ಲಿ ಜೆಎಸ್‌ಟಿ ಎಂಬ ಸರಕು ಹಾಗೂ ಸೇವಾ ತೆರಿಗೆ ವ್ಯವಸ್ಥೆ ಜಾರಿ ಆರ್ಥಿಕ ಸುಧಾರಣೆಯಲ್ಲಿ ಕ್ರಾಂತಿಕಾರಿ ಕ್ರಮವಾಗಿದ್ದರೂ ಕಾಂಗ್ರೆಸ್ ಅದರ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿರುವುದು ಅದು ಸುಧಾರಣಾ ವಿರೋಧಿ ಮನಸ್ಥಿತಿ ಬೆಳೆಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.

ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರದ ತೆರಿಗೆ ಸುಧಾರಣೆ ಯಲ್ಲಿ ದೊಡ್ಡ ಪರಿವರ್ತನೆ ತರಲಾಗಿದ್ದರೂ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅರೆಬೆಂದ ಸ್ಥಿತಿಯಲ್ಲಿ ಜಿಎಸ್‌ಟಿ ಅನುಷ್ಟಾನವಾಗುತ್ತಿದೆ ಎಂದಿರುವುದು ಅವರ ಮನಸ್ಥಿತಿ ಅರೆಬೆಂದ ಸ್ಥಿತಿಯಲ್ಲಿರುವುದನ್ನು ತೋರಿಸುತ್ತದೆ ಎಂದು ದೂರಿದರು.

ದೇಶದಲ್ಲಿದ್ದ ಸುಮಾರು 500 ವಿವಿಧ ಪ್ರತ್ಯಕ್ಷ ತೆರಿಗೆಗಳು ಪರೋಕ್ಷ ವಾಗಿದ್ದ 17 ತೆರಿಗೆಗಳಿಂದ ಮುಕ್ತಿಗೊಳಿಸಿ ದೇಶದದಲ್ಲಿ ಏಕರೂಪದ ತೆರಿಗೆಗೆ ಒಳಪಡಿಸಿದ ಕ್ಷಣ ನಿನ್ನೆ ಮಧ್ಯರಾತ್ರಿ ಪಾರ್ಲಿಮೆಂಟ್‌ನ ಸೆಂಟ್ರಲ್‌ಹಾಲ್‌ನಲ್ಲಿ ನಡೆದಿದೆ. ಈ ವ್ಯವಸ್ಥೆ ಜಾರಿಯಿಂದ ಪ್ರಾಮಾಣಿಕರಿಗೆ ರಕ್ಷಣೆ, ತೆರಿಗೆಗಳ್ಳತನಕ್ಕೆ ಅವಕಾಶವಿಲ್ಲದ ರೀತಿ ಗ್ರಾಹಕರು ಮತ್ತು ದೇಶಕ್ಕೆ ಅನುಕೂಲವಾಗುವ ದಿಟ್ಟ ಕ್ರಮ ಇದಾಗಿದೆ. ಈ ವ್ಯವಸ್ಥೆ ಜಾರಿಯಿಂದ ತೆರಿಗೆ ವಂಚನೆಗೆ ಅವಕಾಶ ಕಡಿಮೆ ಯಾಗಿರುವುದರಿಂದ ದೇಶದ ಆರ್ಥಿಕ ಅಭಿವೃದ್ಧಿ ಪಡೆಯಲಿದೆ ಎಂದರು.

ಈ ತೆರಿಗೆ ಸಂಗ್ರಹದ ಲಾಭ ಭವಿಷ್ಯದಲ್ಲಿ ಜನಸಾಮಾನ್ಯರಿಗೆ ಹರಿದು ಬರಲಿದೆ. 17 ವರ್ಷಗಳ ಸುದೀರ್ಘ ಚರ್ಚೆಗೆ ಒಳಪಡಿಸಲಾಗಿದೆ. ಕಳೆದ 2000 ಇಸವಿಯಲ್ಲಿ ಚರ್ಚೆ ಆರಂಭಿಸಿದ್ದು 2002 ರಲ್ಲಿ ಕರಡು ಸಿದ್ಧವಾಗಿತ್ತು. 2015 ರಿಂದ ನಿರಂತರವಾಗಿ ಚರ್ಚೆಗಳು ನಡೆದಿದ್ದು 18 ಬಾರಿ ಜಿಎಸ್‌ಟಿ ಮಂಡಳಿ ಸಭೆ ನಡೆಸಿದ್ದು, ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಗಳಿಗೆ ಉಂಟಾಗಿರುವ ನಷ್ಟ ಭರಸುವ ವಾಗ್ಧಾನದ ಜೊತೆ ಶೇ.15ರಷ್ಟು ಆದಾಯದಲ್ಲಿ ಹೆಚ್ಚಳದ ಖಾತ್ರಿಯೂ ನೀಡಲಾಗಿದೆ. ದೇಶದ 29 ರಾಜ್ಯಗಳು 7 ಕೇಂದ್ರಾಡಳಿತ ಪ್ರದೇಶಗಳ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ರಾದ ಹೆಚ್.ಡಿ.ತಮ್ಮಯ್ಯ, ರಾಜ ಶೇಖರ್, ಕೋಟೆ ರಂಗಣ್ಣ, ನಗರಸಭಾಧ್ಯಕ್ಷೆ ಕವಿತಾ ಶೇಖರ್ ಅವರೊಂದಿಗೆ ಶಿವಮೊಗ್ಗದ ಮುಖಂಡ ದತ್ತಾತ್ರೇಯ ಉಪಸ್ಥಿತರದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News