ಜು.2: ವರ್ತಮಾನದ ತಲ್ಲಣಗಳು ಮತ್ತು ಸಂವಿಧಾನ ಕುರಿತು ವಿಚಾರಗೋಷ್ಠಿ
Update: 2017-07-01 20:37 IST
ಪಾಂಡವಪುರ, ಜುಲೈ,1: ವಾನವ ಬಂಧುತ್ವ ವೇದಿಕೆ ಕರ್ನಾಟಕದ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ನಾಳೆ (ಜು.2) ಬೆಳಗ್ಗೆ 11ಕ್ಕೆ ಪಾಂಡವಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ‘ವರ್ತಮಾನದ ತಲ್ಲಣಗಳುಮತ್ತು ಸಂವಿಧಾನ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿದೆ.
ಸಾಹಿತಿ ಹಾಗೂ ವಿಚಾರವಾದಿ ಯೋಗೇಶ್ ಮಾಸ್ಟರ್ ಭಾಗವಹಿಸಲಿದ್ದು, ಗೋಷ್ಠಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯ, ಆಹಾರ ಪದ್ದತಿ, ರಾಜಕಾರಣ, ಭಾರತದ ನೈಜ ಇತಿಹಾಸ, ಮೌಢ್ಯತೆ, ಮಾನವ ಬಂಧುತ್ವ ವೇದಿಕೆಯ ಕಲ್ಪನೆಗಳು ಮತ್ತು ಸಂವಿಧಾನದ ಆಶಯಗಳ ಕುರಿತು ಚರ್ಚೆ ನಡೆಯಲಿದೆ.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಿಚಾರಗೋಷ್ಠಿ ಉದ್ಘಾಟಿಸಲಿದ್ದು, ಮಾನವ ಬಂಧಿತ್ವ ವೇದಿಕೆಯ ರಾಜ್ಯ ಸಂಚಾಲಕ ಹಾಗೂ ಪತ್ರಕರ್ತ ವಿಲ್‌ಫ್ರೆಡ್ ಡಿಸೋಜಾ ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ,ವಿಚಾರ ವಿನಿಮಯ ಹಾಗೂ ಕಾರ್ಯಕರ್ತರ ಅಧ್ಯಯನ ಶಿಬಿರ ನಡೆಯಲಿದೆ ಎಂದು ವಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ನಜೀರ್ ಅಹಮದ್ ತಿಳಿಸಿದ್ದಾರೆ.