ಮಲೆನಾಡು ಬಯಲುಸೀಮೆಯಾಗುತ್ತಿದೆ: ಸಿ.ಟಿ.ರವಿ
ಚಿಕ್ಕಮಗಳೂರು, ಜು.2: ಮಲೆನಾಡಿನಲ್ಲಿ ಗಿಡ ಮರಗಳ ಸಂಖ್ಯೆ ಕಡಿಮೆಯಾಗಿ ಸರಿಯಾಗಿ ಮಳೆ ಬಾರದೇ ಬಯಲುಸೀಮೆಯಾಗುತ್ತಿದೆ. ಇದರಿಂದ ಮುಂದೆ ಭೀಕರ ಬರಗಾಲವನ್ನು ಎದುರಿಸುವಂತಾಗುತ್ತದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಅವರು ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘಗಳ ಲಾಭಾಂಶ ವಿತರಣೆ ಕಾರ್ಯಕ್ರಮದಲ್ಲಿ ಮಂಜುಶ್ರೀ ಉದ್ಯಾನವನ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಇಂತಹ ಉದ್ಯಾನವನ ನಿರ್ಮಿಸುವುದರಿಂದ ಬರಗಾಲವನ್ನುಎದುರಿಸಬಹುದಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃಧ್ದಿ ಯೋಜನೆ ರಾಜ್ಯದೆಲ್ಲೆಡೆ ಜನಸಾಮಾನ್ಯರ ನಡುವೆ ಒಂದು ಪ್ರಾಮಾಣಿಕತೆಯನ್ನುಬೆಳೆಸುವ ಕೆಲಸವನ್ನು ಮಾಡುತ್ತಿದೆಎಂದು ಕೊಂಡಾಡಿದರು.
ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್.ಮಂಜುನಾಥ್ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಿ ಮಾತನಾಡಿ, ಉಳಿತಾಯ ಮತ್ತು ಸಾಲ ಸೌಲಭ್ಯವನ್ನು ಡಿಜಿಟಲೀಕರಣ ಮಾಡಿರುವುದರಿಂದ ಸಂಘದ ಸದಸ್ಯರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಇದರಿಂದಅ ತೀ ಶೀಘ್ರವಾಗಿ ಸೌಲಭ್ಯ ದೂರೆಯುತ್ತಿದೆ. ಇದಕ್ಕೆಐ.ಡಿ.ಬಿ.ಐ ಬ್ಯಾಂಕ್ ಸಹಕಾರ ನೀಡುತ್ತಿದೆಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜಿಲ್ಲೆಯ ಸ್ತ್ರೀಯರು 4 ಗೋಡೆಗಳ ಮಧ್ಯೆ ಇರದೆ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಉದ್ಯೋಗ ನಡೆಸಿ ಸುಂದರ ಜೀವನ ನಡೆಸಬೇಕಾದರೆ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯೇ ಕಾರಣ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಲಿಟ್ಟು10 ವರ್ಷ ಕಳೆದಿದೆ. ಯೋಜನೆಯು ಸಣ್ಣ ಕೃಷಿಕರು ಮತ್ತು ದುರ್ಬಲ ವರ್ಗದ ಮಹಿಳೆಯರನ್ನು ಸಂಘಟಿಸಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ.ಇದಕ್ಕಾಗಿಜಿಲ್ಲೆಯಾದ್ಯಂತ ರಚಿಸಲಾದ ಸ್ವಸಹಾಯ ಸಂಘಗಳ ತರಬೇತಿ ಮತ್ತು ನಿರ್ವಹಣೆಗಾಗಿ ಚಿಕ್ಕಮಗಳೂರು ನರಾಭಿವೃದ್ದಿ ಪ್ರಾಧಿಕಾರವು ಭಗತ್ ಸಿಂಗ್ ಆಟೋ ನಿಲ್ದಾಣದ ಹಿಂಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ್ಥಳಾವಕಾಶವನ್ನು ಮಾಡಿಕೊಟ್ಟಿದೆ.
ಮುಖ್ಯ ಅತಿಥಿಗಳಾಗಿ ಸಿಡಿಎ ಅಧ್ಯಕ್ಷ ಸ್ಯೆಯ್ಯದ್ ಹನೀಫ್, ಚಂದ್ರೇಗೌಡ, ಪ್ರಾದೇಶಿಕ ನಿರ್ದೇಶಕ ಮಹಾವೀರ್ ಅಜ್ರಿ, ಧರ್ಮಸ್ಥಳ ಯೋಜನೆಯ ನಿರ್ದೇಶಕಿ ಗೀತಾ, ಯೋಜನಾಧಿಕಾರಿ ಬೇಬಿ ಮತ್ತಿತರರು ಹಾಜರಿದ್ದರು.