×
Ad

ದಾವಣಗೆರೆ: ಸರಳ ಸಾಮೂಹಿಕ ವಿವಾಹ

Update: 2017-07-02 17:24 IST

ದಾವಣಗೆರೆ, ಜು.2: ಜೆ.ಎಚ್. ಪಟೇಲ್ ಮನೆತನದ ಸಾಮಾಜಿಕ ಕಾರ್ಯಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಇಡೀ ಸಾಮಾಜಕ್ಕೆ ಸಾಮರಸ್ಯ ಮೂಡಿಸುವ ಕಾರ್ಯ ಮಾಡುವ ಮುಖೇನ ಎಲ್ಲಾ ಸಮುದಾಯವನ್ನು ಜೊತೆಜೊತೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ ತಿಳಿಸಿದರು.

ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಆವರಣದ ಗಾಂಧಿ ಅಂಬೇಡ್ಕರ್ ವೇದಿಕೆಯಲ್ಲಿ ಜೆ.ಎಚ್. ಪಟೇಲ್ ವಿವಿಧೋದ್ದೇಶ ಸಹಕಾರ ಸಂಘದಿಂದ ಹಮ್ಮಿಕೊಂಡಿದ್ದ 17 ಜೋಡಿಗಳ ಸರಳ ಸಾಮೂಹಿಕ ವಿವಾಹದಲ್ಲಿ ನೂತನ ವಧುವರರಿಗೆ ಶುಭ ಹಾರೈಸಿ ಅವರು ಮಾತನಾಡಿದರು.

ಜೆ.ಎಚ್. ಪಟೇಲ್ ಮನೆತನದವರು ಯಾರೇ ಇದ್ದರೂ ಅವರು ವಿಧಾನಸಭೆ, ಪಾರ್ಲಿಮೆಂಟ್‌ನಲ್ಲಿ ಇರಲಿ. ಆಗ ಅವರ ವಿಚಾರಧಾರೆಗಳನ್ನು ಎಲ್ಲರಿಗೂ ಪರಿಚಯಿಸಲು ಅನುಕೂಲವಾಗುತ್ತದೆ ಎಂದ ಅವರು, ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ಹಲವಾರು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟ ಜೆ.ಎಚ್. ಪಟೇಲ್ ವಿವಿಧೋದ್ದೇಶ ಸಹಕಾರ ಸಂಘಕ್ಕೆ ವೈಯಕ್ತಿಕವಾಗಿ 1 ಲಕ್ಷ ಹಾಗೂ ಪರಿಶಿಷ್ಠ ಜಾತಿ ಕಲ್ಯಾಣ ಸಮಿತಿಯಿಂದ 50 ಸಾವಿರ ರೂ. ನೀಡಲಾಗುವುದು ಎಂದು ಅವರು ಘೋಷಿಸಿದರು.

ಹೆಣ್ಣು ಸಮಾಜದ ಕಣ್ಣಿದ್ದಂತೆ. ಆಕೆ ಸೃಷ್ಟಿಕರ್ತೆ. ಆದ್ದರಿಂದ ಹೆಣ್ಣಿನ ರಕ್ಷಣೆ ಮಾಡಬೇಕು. ಸಮಾಜದಲ್ಲಿ ಹೆಣ್ಣಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದ ಅವರು, ರೈತರು ಬೆಳೆ ಬೆಳೆಯಲು ಖರ್ಚು ಮಾಡುವ ಮೊತ್ತಕ್ಕಿಂತ ಹೆಚ್ಚಿನ ದರ ನೀಡುವ ವೈಜ್ಞಾನಿಕ ಪದ್ಧತಿ ತರುವಂತೆ ಜಿಎಸ್‌ಟಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳದಿರುವುದು ಬೇಸರ ಮೂಡಸಿದೆ ಎಂದರು.

ಈ ಸಂದರ್ಭ ಜಿಪಂ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಮಾಜಿ ಸದಸ್ಯ ಲತಾ ತೇಜಸ್ವಿ ಪಟೇಲ್, ಜಿಪಂ ಸದಸ್ಯ ಲೋಕೇಶ್ವರಪ್ಪ, ಸುಶೀಲಮ್ಮ, ಶಿಕ್ಷಣ ಮತ್ತು ಆರೋಗ್ಯ ಸಮಿತಿ ಪಿ. ವಾಗೀಶ್, ನಟರಾಜ್, ರೈತ ಮುಖಂಡ ಓಂಕಾರಪ್ಪ, ಸಮಾಜ ಕಲ್ಯಾಣ ಇಲಾಕೆ ಅಧಿಕಾರಿ ಕುಮಾರ್ ಹನುಮಂತಪ್ಪ, ಜಯದೇವಪ್ಪ, ಕೆ.ಎಸ್. ವಿಜಯಕುಮಾರ್ ಮತ್ತಿತರರಿದ್ದರು.

ಕರಿಬಸಪ್ಪ ಸ್ವಾಗತಿಸಿದರು. ರಘುದೊಡ್ಮನಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News