×
Ad

ಜು.8-9: ಶ್ರೀಬಸವೇಶ್ವರ ಕ್ರೆಡಿಟ್ ಸೋಸೈಟಿ ರಜತ ಮಹೋತ್ಸವ

Update: 2017-07-05 18:31 IST

ತುಮಕೂರು.ಜು.5: ಕಳೆದ 25 ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಬಸವೇಶ್ವರ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ತನ್ನ ರಜತ ಮಹೋತ್ಸವ ಕಾರ್ಯಕ್ರಮವನ್ನು ಜುಲೈ 8 ಮತ್ತು 9 ರಂದು ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸೊಸ್ಶೆಟಿಯ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,1992ರಲ್ಲಿ ಆರಂಭವಾದ ಬ್ಯಾಂಕು ಹಲವು ವರ್ಷಗಳಿಂದ ಎ ಗ್ರೆಡ್ ಸೈಸೊಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ಈ ವರ್ಷ 3.70 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.ಇದುವರೆಗೂ ಶೇ18 ರಷ್ಟು ಡಿವಿಡೆಂಟ್ ನೀಡಿದ್ದು,ಈ ವರ್ಷ ಶೇ20ರಷ್ಟು ಡಿವಿಡೆಂಟ್ ಘೋಷಿಸಲಿದೆ ಎಂದರು.

ಜುಲೈ 08-09ರಂದು ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಆಯೋಜಿಸಿರುವ ರಜತ ಮಹೋತ್ಸವ ಹಾಗೂ ಶ್ರೀಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ರತ್ನಕಲಾ ಉದ್ಘಾಟಿಸಲಿದ್ದು,ದಿವ್ಯ ಸಾನಿಧ್ಯವನ್ನು ಶ್ರೀ ಅಟವಿ ಶಿವಲಿಂಗ ಮಹಾಸ್ವಾಮೀಜಿ ವಹಿಸಲಿದ್ದಾರೆ.ಡಾ.ಶ್ರೀಶಿವ ಕುಮಾರಸ್ವಾಮೀಜಿ ಅವರ 110 ನೇ ಗುರುವಂದನಾ ಕಾರ್ಯಕ್ರಮವನ್ನು ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ನೆರವೇರಿಸುವರು.ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್ ವಹಿಸುವರು.

ಜುಲೈ 09 ರಂದು ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಮೈಸೂರಿನ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಸ್ವಾಮೀಜಿ ವಹಿಸುವರು.ಮುಖ್ಯ ಅತಿಥಿಗಳಾಗಿ ಕೇಂದ್ರ ಸರಕಾರದ ಮಂತ್ರಿ ಡಿ.ವಿ.ಸದಾನಂದಗೌಡ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಸಿ.ಚನ್ನಿಗಪ್ಪ, ಎಸ್.ಶಿವಣ್ಣ ಮತ್ತಿತರರು ಭಾಗವಹಿಸುವರು ಎಂದು ಟಿ.ಸಿ.ಓಹಿಲೇಶ್ವರ್ ವಿವರ ನೀಡಿದರು.

ಶ್ರೀಬಸವೇಶ್ವರ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ರಾಜಶೇಖರ್ ಮಾತನಾಡಿ, ಕೇಂದ್ರ ಸರಕಾರ ನೋಟು ಅಮಾನಿಕರಣ ಮಾಡಿದ ನಂತರ ಸಹಕಾರಿ ಬ್ಯಾಂಕುಗಳು, ಸೊಸ್ಶೆಟಿಗಳ ವಹಿವಾಟು ಕುಂಠಿತವಾಗಿದ್ದು,ಇದುವರೆಗೂ ಸಹಜ ಸ್ಥಿತಿಗೆ ಬರಲು ಸಾಧ್ಯವಾಗಿಲ್ಲ.ಅಲ್ಲದೆ ಹೊಸದಾಗಿ ಜಾರಿಗೆ ತಂದು 269(ಎಸ್.ಟಿ) ಜಾರಿಯಿಂದ ಸಾಕಷ್ಟು ತೊಂದರೆ ಯಾಗುತ್ತಿದ್ದು,ಸರಕಾರ ಸೊಸ್ಶೆಟಿಗಳಿಗೆ ಮಾತ್ರ ವಿಧಿಸಿರುವ ಈ ನಿಯಮವನ್ನು ಸಡಿಲಗೊಳಿಸಿದರೆ ಮಾತ್ರ ಸಹಕಾರಿ ಕ್ಷೇತ್ರದ ಬ್ಯಾಂಕುಗಳ ಉಳಿಯಲು ಸಾಧ್ಯ.ಈ ನಿಟ್ಟಿನಲ್ಲಿ ಸಹಕಾರಿ ಸೌಹಾರ್ಧ ಮಹಾಮಂಡಳದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News