ಕಗ್ಗೋಡ್ಲು ತೇಜಸ್‌ಗೆ ಕೃಷಿ ಪಂಡಿತ ಪ್ರಶಸ್ತಿ
Update: 2017-07-05 18:37 IST
ಮಡಿಕೇರಿ ಜು.5: ಸಮಗ್ರ ಕೃಷಿ ಪದ್ಧತಿ ಹಾಗೂ ಬೆಳೆ ವೈವಿಧ್ಯೀಕರಣ ವಿಭಾಗದಲ್ಲಿ ಮಾಡಿದ ಅಪ್ರತಿಮ ಸಾಧನೆಗಾಗಿ ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮದ ಪ್ರಗತಿಪರ ಕೃಷಿಕ ಎಂ.ಎನ್.ತೇಜಸ್ ಅವರು ತೃತೀಯ ಸ್ಥಾನದೊಂದಿಗೆ ಕೃಷಿ ಪಂಡಿತಪ್ರಶಸ್ತಿಯನ್ನು ಗಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಕೃಷ್ಣಬೈರೇಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಸಾವಯವ ಕೃಷಿ ಪದ್ಧತಿಯನ್ನೆ ಅವಲಂಭಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಯಶಸ್ಸನ್ನು ಕಂಡಿರುವ ತೇಜಸ್ ಅವರು ಇಲ್ಲಿಯವರೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.