ಅಂಗನವಾಡಿ ಮಕ್ಕಳಿಗೆ ಬರೆ ಎಳೆದ ಶಿಕ್ಷಕಿ
ಬಾಗೇಪಲ್ಲಿ, ಜು.6: ಅಂಗನವಾಡಿ ಶಾಲೆಯಲ್ಲಿ ತುಂಟಾಟ ಮಾಡುತ್ತಿದ್ದ ಚಿಣ್ಣರಿಗೆ ಅಂಗನವಾಡಿ ಶಿಕ್ಷಕಿ ಕೈ,ತುಟಿಗಳ ಮೇಲೆ ಸುಟ್ಟಿರುವ ಘಟನೆ ತಾಲೂಕಿನ ಗೂಳೂರು ಹೋಬಳಿ ಮಾರ್ಗಾನುಕುಂಟೆ ಗ್ರಾಪಂ ವ್ಯಾಪ್ತಿಯ ದೇವಿಕುಂಟೆ ಅಂಗನವಾಡಿ ಶಾಲೆಯಲ್ಲಿ ನಡೆದಿದೆ.
ದೇವಿಕುಂಟೆ ಗ್ರಾಮದ ಸುಜಾತಮ್ಮ ಎಂಬರವ ಮಗನಾದ ಸ್ವಾತೀಕ್(5) ಎಂದಿನಂತೆ ಬುಧವಾರ ಅಂಗನವಾಡಿಗೆ ತೆರಳಿದ್ದ. ಅಂಗನವಾಡಿಯಲ್ಲಿ ಸ್ನೇಹಿತರೊಂದಿಗೆ ತುಂಟಾಡ ಮಾಡುತ್ತಿದ್ದುದರಿಂದ ಕೋಪಗೊಂಡ ಶಿಕ್ಷಕಿ ಲಲಿತಮ್ಮ ಪಾಕಶಾಲೆಯಲ್ಲಿದ್ದ ಚಾಕುವನ್ನು ಕಾಯಿಸಿ ಸ್ವಾತೀಕ್ ಸೇರಿದಂತೆ ಇತರ ಪುಟಾಣಿಗಳ ಕೈ, ತುಟಿ ಹಾಗೂ ಇತರ ಕಡೆಗಳಲ್ಲಿ ಸುಟ್ಟಿದ್ದಾರೆ.
ಈ ವಿಷಯನ್ನು ತಿಳಿದ ಸ್ವಾತೀಕ್ ತಾಯಿ ಸುಜಾತಮ್ಮ ಅಂಗನವಾಡಿ ಶಿಕ್ಷಕಿಯನ್ನು ಕೇಳಲು ಹೋದಾಗ ಶಿಕ್ಷಕಿಯ ಗಂಡ ಶಂಕರಪ್ಪ ಸುಜಾತಮ್ಮನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಸುಜಾತಮ್ಮ ಸಿಡಿಪಿಒ ಕಚೇರಿಗೆ ಈ ಬಗ್ಗೆ ದೂರು ನೀಡಿ ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದು, ಆದರೆ ಮಾರ್ಗಾನುಕುಂಟೆ ಗ್ರಾಪಂ ಅಧ್ಯಕ್ಷ ಶಂಕರ ನೇತೃತ್ವದಲ್ಲಿ ಖಾಜಿ ನ್ಯಾಯ ನಡೆಸಿ ಅಂಗನವಾಡಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿ ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳುಹಿಸಬಾರದು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಅನುಸೂಬಾಯಿ ಅವರನ್ನು ಪ್ರಶ್ನಿಸಿದಾಗ ಈ ಪ್ರಕರಣ ನಡೆದಿರುವುದು ನಿಜ. ಆದರೆ ಎರಡು ಕಡೆಯವರು ಪಂಚಾಯಿತಿ ಮಾಡಿಕೊಂಡು ರಾಜಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಾವು ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.