ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರು : 16 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಚಾಮರಾಜನಗರ,ಜು.6: ಜಿಲ್ಲಾದ್ಯಂತ ನೆಡದಿರುವ ಪ್ರತ್ಯೇಕ ಮೂರು ಕಳ್ಳತನ ಪ್ರಕರಣ ಗಳನ್ನು ಭೇದಿಸಿರುವ ಚಾಮರಾಜನಗರ ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 16,100 00 ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಚಾಮರಾಜನಗರವು ಸೇರಿದಂತೆ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ನಡೆದ 19 ಕಳ್ಳತನ ಪ್ರಕರಣ ಹಾಗೂ ಚಾಮರಾಜನಗರ ವ್ಯಾಪ್ತಿಯಲ್ಲಿ ನಡೆದಿರುವ 7 ಕಳ್ಳತನ ಪ್ರಕರವನ್ನು ಪತ್ತೆ ಹಚ್ಚಿ ಇಬ್ಬರು ಆರೋಪಿಗಳಿಂದ ಬಾರಿ ಪ್ರಮಾಣದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2014, 2015, 2016 ಹಾಗೂ 2017 ರಲ್ಲಿ ಮಹದೇಶ್ವರ ಬೆಟ್ಟ ದಲ್ಲಿ ನಡೆದ 19 ಕಳ್ಳತನ ಪ್ರಕರಣದ ಆರೋಪಿಗಳಾದ ಮೈಸೂರಿನ ವಸಂತ, ಚನ್ನರಾ ಯಪಟ್ಟಣದ ನಾಗರತ್ನ, ಗುಡ್ಲುಪೇಟೆ ತಾಲೂಕಿನ ಮುದ್ದಯ್ಯನ ಹುಂಡಿಗ್ರಾಮ ಜ್ಯೋತಿ ಅವರಿಂದ 10,74,000 ರೂ.ಮೌಲ್ಯದ ಚಿನ್ನದ ಮಾಂಗಲ್ಯ ಸರಗಳು ಹಾಗೂ ವಿವಿಧ ರೀತಿಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.