×
Ad

ಜವಳಿ ಹಾಗೂ ರೆಡಿಮೇಡ್ ವ್ಯಾಪಾರಿಗಳಿಂದ ಜಿ ಎಸ್ ಟಿ ವಿರುದ್ಧ ಪ್ರತಿಭಟನೆ

Update: 2017-07-06 18:53 IST

ಕಲಬುರಗಿ,ಜು.6: ಕೇಂದ್ರ ಸರಕಾರ ನೂತನವಾಗಿ ಜಾರಿಗೊಳಿಸಿರುವ ಜಿ ಎಸ್ ಟಿ ವಿರುದ್ಧ ಕಲಬುರಗಿ ಜವಳಿ ಹಾಗೂ ರೆಡಿಮೇಡ್ ವ್ಯಾಪಾರಿಗಳು ತಮ್ಮ ಅಂಗಡಿಗಳು ಬಂದ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು.

ಜವಳಿ ಹಾಗೂ ರೆಡಿಮೇಡ್ ಬಟ್ಟೆ ಅಂಗಡಿ ಮಾಲೀಕರು ಕೇಂದ್ರ ಸರಕಾರ ಜವಳಿ ಮತ್ತು ರೇಡಿಮೇಡ್ ಉದ್ಯಮಕ್ಕೆ ನೂತನವಾಗಿ ಜಾರಿಯಾದ 5% ಜಿ ಎಸ್ ಟಿ ನೀತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸೂಪರ್ ಮಾರ್ಕೆಟ್ ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಅರವಿಂದ ಮೈಲಾಪೂರ ಮಾತನಾಡಿ ಕೇಂದ್ರ ಜಿ ಎಸ್ ಟಿ ನೀತಿ ವ್ಯಾಪಾರಿ ಹಾಗೂ ಗ್ರಾಹಕರಿಗೆ ಹೊರೆಯಾಗುತ್ತಿದೆ, ಇದರಿಂದ ವ್ಯಾಪಾರದಲ್ಲಿ ಏರಿಳಿತ ಉಂಟಾಗಿದ್ದು, ವ್ಯಾಪಾರಿಗಳಿಗೆ ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರಕಾರ ಜವಳಿ ಹಾಗೂ ರೀಡಿಮೇಡ್ ಉದ್ಯಮಕ್ಕೆ 5% ಜಿಎಸ್ಟಿಯನ್ನು ರದ್ದು ಪಡಿಸಬೇಕೆಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಜಿಲ್ಲಾಧಿಕಾರಿಗಳ ಮೂಲಕ ಆಗ್ರಹಿಸಿದ್ದರು.

ಪ್ರತಿಭಟನೆಯಲ್ಲಿ ಆನಂದ ದಂಡೋತಿ, ಜವಳಿ ಹಾಗೂ ರೇಡಿಮೇಡ್ ಬಟ್ಟೆ ವ್ಯಾಪಾರಿಗಳು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News