ಗೂಡ್ಸ್ ಆಟೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದರು!
Update: 2017-07-06 20:13 IST
ಮಂಡ್ಯ, ಜು.6: ಸಕಾಲಕ್ಕೆ 108 ಆ್ಯಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಯನ್ನು ಗೂಡ್ಸ್ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ರೋಹಿತ್ ಎಂಬವರ ಪತ್ನಿ ಸುಹಾಸಿನಿ ಹೆರಿಗೆ ನೋವಿನಿಂದ ನರಳುತ್ತಿದ್ದು, ಹಲವು ಬಾರಿ ದೂರವಾಣಿ ಕರೆ ಮಾಡಿದರೂ 108 ಸಿಬ್ಬಂದಿ ಸ್ಪಂದಿಸಲಿಲ್ಲ. ಕೊನೆಗೆ ಮಾರ್ಗಮಧ್ಯೆ ಬರುತ್ತಿದ್ದ ಗೂಡ್ಸ್ ಆಟೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಗ್ರಾಮದ ಡಿಎಸ್‌ಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಗೂಡ್ಸ್ ಆಟೋ ಸಿಗದಿದ್ದರೆ ಗರ್ಭಿಣಿಗೆ ತೊಂದರೆಯಾಗುತ್ತಿತ್ತು ಎಂದಿರುವ ಅವರು, ದೂರವಾಣಿ ಕರೆಮಾಡಿದರೂ ಸ್ಪಂದಿಸದ 108 ವಾಹನ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.