ವಿದ್ಯುತ್ ಆಘಾತ: ಮನೆ ಭಸ್ಮ
Update: 2017-07-08 16:34 IST
ಗುಂಡ್ಲುಪೇಟೆ, ಜು.8: ವಿದ್ಯುತ್ ಆಘಾತದಿಂದ ಮನೆಯು ಸಂಪೂರ್ಣ ಭಸ್ಮವಾಗಿರುವ ಘಟನೆ ಪಟ್ಟಣದ 17 ನೇ ವಾರ್ಡಿನಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ 17 ನೇ ವಾರ್ಡ್ ನಿವಾಸಿ ರಾಜು ಎಂಬುವ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಟಿವಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಸರಿಂದ ಗಾಬರಿಗೊಂಡ ಮನೆಯವರು ಹೊರಬರುತ್ತಿದ್ದಂತೆಯೇ ಬೆಂಕಿಯು ಕ್ಷಣದಲ್ಲಿ ಇಡೀ ಮನೆಯನ್ನು ಆವರಿಸಿಕೊಂಡಿದೆ. ಅಗ್ನಿಶಾಮಕ ದಳದವರು ಬಂದು ಬೆಂಕಿಯು ಅಕ್ಕಪಕ್ಕ ಹರಡದಂತೆ ಆರಿಸಿದ್ದಾರೆ.
ಘಟನೆಯಲ್ಲಿ ಮನೆಯಲ್ಲಿದ್ದ 1 ಲಕ್ಷ ರೂ. ನಗದು, 2 ಲಕ್ಷ ರೂ.ಗೂ ಹೆಚ್ಚಿನ ಬೆಲೆಬಾಳುವ ಚಿನ್ನ, ಬೆಳ್ಳಿ ಆಭರಣಗಳು, ಆಹಾರ ಪದಾರ್ಥಗಳು, ಮರಮಟ್ಟುಗಳು, ಬಟ್ಟೆ ಬರೆಗಳೂ ಸಂಪೂರ್ಣ ಭಸ್ಮವಾಗಿವೆ. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.