ಕಳ್ಳತನಕ್ಕೆ ಯತ್ನ: ಆರೋಪಿ ಬಂಧನ
Update: 2017-07-08 17:45 IST
ಮೂಡಿಗೆರೆ, ಜು.8: ತಾಲೂಕಿನ ಕೆಸವೊಳಲು ಗ್ರಾಮದ ಮಹಾರುದ್ರ ದೇವಸ್ಥಾನಕ್ಕೆ ನುಗ್ಗಿ ಕಳವಿಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಭದ್ರಾವತಿಯ ಭದ್ರ ಕಾಲನಿಯ ನಸ್ರುದ್ದೀನ್ (25) ಎಂಬಾತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.