ರೋಟರಿ ಕ್ಲಬ್ ಅಧ್ಯಕ್ಷರಾಗಿ ಪಿ.ಯು.ಪ್ರೀತಮ್
ಮಡಿಕೇರಿ, ಜು.8: ಭವಿಷ್ಯದಲ್ಲಿ ಇಡೀ ಜಗತ್ತಿನಲ್ಲಿಯೇ ವಾಯುಮಾಲಿನ್ಯ, ಜಲಕೊರತೆಯಂಥ ದುರಂಥಗಳು ಸಂಭವಿಸುವ ಸಾಧ್ಯತೆಗಳಿದ್ದು, ಇದನ್ನು ತಡೆಗಟ್ಟಲು ನಿಸರ್ಗ ರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿ ಕಾರ್ಯ ಯೋಜನೆ ರೂಪಿಸುವ ಅನಿವಾಯರ್ತೆ ಇದೆ ಎಂದು ರೋಟರಿ ಜಿಲ್ಲೆ 3181 ನ ಗವನರ್ ಮಾತಂಡ ಸುರೇಶ್ ಚಂಗಪ್ಪ ಹೇಳಿದರು.
ಮಡಿಕೇರಿ ರೋಟರಿ ಕ್ಲಬ್ ನ 67 ನೇ ಅಧ್ಯಕ್ಷರಾಗಿ ಪಿ.ಯು.ಪ್ರೀತಮ್ ಮತ್ತು ಕಾಯರ್ದಶಿರ್ಯಾಗಿ ರತನ್ ಕಾಯರ್ಪ್ಪ ಅಧಿಕಾರ ಪದಗ್ರಹಣ ಕಾಯರ್ಕ್ರಮದಲ್ಲಿ ಮಾತನಾಡಿದ ಜಿಲ್ಲಾ ರೋಟರಿ ಗವನರ್ ಮಾತಂಡ ಸುರೇಶ್ ಚಂಗಪ್ಪ, ನಿಸರ್ಗ ರಕ್ಷಣೆ ಇಂದಿನ ಅನಿವಾಯರ್ತೆಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿ ಗಾಳಿ ಸೇವನೆಗೂ ಕೋಟ್ಯಾಂತರ ರುಪಾಯಿ ಮೌಲ್ಯ ವೆಚ್ಚವಾಗುವಂಥ ಸ್ಥಿತಿ ಬಂದೊಗಲಿದೆ. ಇಂಥ ಅಪಾಯ ತಡೆಯುವ ನಿಟ್ಟಿನಲ್ಲಿ ಈಗಲೇ ಜಾಗೃ ತರಾಗುವುದು ಸೂಕ್ತ. ಈ ನಿಟ್ಟಿನಲ್ಲಿ ರೋಟರಿ ಜಿಲ್ಲೆ ಈ ಬಾರಿ ಪರಿಸರ ರಕ್ಷಣೆಗೆ ಒತ್ತು ನೀಡುವ ಕಾಯರ್ಕ್ರಮಗಳನ್ನು ಹಮ್ಮಿಕೊಂಡಿದೆ. ನಾಲ್ಕು ಕಂದಾಯ ಜಿಲ್ಲೆಗಳನ್ನು ಹೊಂದಿರುವ ರೋಟರಿ ಜಿಲ್ಲೆಯಲ್ಲಿ ಮುಂದಿನ 1 ವಷರ್ದಲ್ಲಿ 1 ಲಕ್ಷ ಸಸಿಗಳನ್ನು ರೋಟರಿ ಸದಸ್ಯರು ನೆಡುವ ಮೂಲಕ ವೃಕ್ಷಾಂದೋಲನಕ್ಕೆ ಮುಂದಾಗಲಿದ್ದಾರೆ ಎಂದು ತಿಳಿಸಿದರು.
ದೇವರು ನೀಡಿರುವ ಪ್ರಾಕೃತಿಕ ಕೊಡುಗೆಗೆ ಉಪಕಾರವೆಂಬಂತೆ ನಾವೂ ನಿಸರ್ಗ ಕ್ಕೆ ಏನಾದರು ಮಹತ್ವದ್ದನ್ನು ನೀಡಬೇಕಾಗಿದೆ. ಮುಂದಿನ ದಿನಗಳಲ್ಲಿ ಯುವಪೀಳಿಗೆ ಮೂಲಕ ರೋಟರಿ ಕ್ಲಬ್ ಗಳು ಸಾವಿರಾರು ಸಸಿಗಳನ್ನು ನೆಡುವ ಕಾಯರ್ಕ್ರಮ ಆಯೋಜಿಸಲಿದೆ ಎಂದು ಸುರೇಶ್ ಚಂಗಪ್ಪ ತಿಳಿಸಿದರು.
ಜಿಲ್ಲಾ ಸಹಾಯಕ ಗವನರ್ ಮಹೇಶ್ ನಲ್ವಾಡೆ ಕ್ಲಬ್ ನ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿ, ನಿತ್ಯಜ್ಯೋತಿ ಯೋಜನೆಯ ಮೂಲಕ ರೋಟರಿ ಜಿಲ್ಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 1700 ಫಲಾನುಭವಿಗಳಿಗೆ ದೀಪ ನೀಡುವ ಗುರಿ ಹೊಂದಲಾಗಿದೆ. ಸ್ವಚ್ಚ ಭಾರತ್ ಯೋಜನೆಯಲ್ಲಿಯೂ ರೋಟರಿ ಕಾಯರ್ ಪ್ರವೃತ್ತವಾಗಲಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಡಾ.ರವಿಕರುಂಬಯ್ಯ ಅವರನ್ನು ಹೊಸ ಸದಸ್ಯರನ್ನಾಗಿ ಮಡಿಕೇರಿ ರೋಟರಿಗೆ ಸೇಪರ್ಡೆಗೊಳಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ರೋಟರಿ ಕ್ಲಬ್ ನ ನೂತನ ಕಾಯರ್ದಶಿರ್ರತನ್ ತಮ್ಮಯ್ಯ ವಂದಿಸಿದ ಕಾಯರ್ ಕ್ರಮದಲ್ಲಿ ಎಂ. ಈಶ್ವರ ಭಟ್, ಕೆ.ಎಂ. ಕರುಂಬಯ್ಯ, ಚೀಯಣ್ಣ , ಅಮರ್ ಶಮಾರ್,ಅನಿಲ್ ಕೃಷ್ಣಾನಿ ನಿರೂಪಿಸಿದರು. ಜಿಲ್ಲೆಯ ವಿವಿಧ ರೋಟರಿ ಕ್ಲಬ್ ಗಳ ಸದಸ್ಯರು ಹಾಜರಿದ್ದರು.