ಎಚ್1ಎನ್1ಗೆ ಮಹಿಳೆ ಬಲಿ
Update: 2017-07-08 20:10 IST
ಮಂಡ್ಯ, ಜು.8: ಎಚ್1ಎನ್1 (ಹಂದಿಜ್ವರ) ಸೋಂಕಿಗೆ ಕೃಷ್ಣರಾಜಪೇಟೆ ತಾಲೂಕು ಐಚನಹಳ್ಳಿಯ ಮಾದೇವ ಅವರ ಪತ್ನಿ ಸುಶೀಲಮ್ಮ(48) ಬಲಿಯಾಗಿದ್ದಾರೆ.
15 ದಿನದಿಂದ ತೀವ್ರ ಜ್ವರಪೀಡತರಾಗಿದ್ದ ಸುಶೀಲಮ್ಮ ಅವರನ್ನು ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರೂ ಪ್ರಯೋಜನವಾಗಿದೆ ಶನಿವಾರ ಮೃತಪಟ್ಟಿದ್ದಾರೆ.
ಸುಶೀಲಮ್ಮ ಅವರು ಎಚ್1ಎನ್1 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆಂದು ಆಕೆಯ ಕುಟುಂಬದವರು ಹೇಳಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.