ಮದ್ದೂರು ಕೆರೆಯಲ್ಲಿ ಧರಣಿ ಮುಂದುವರಿಕೆ
ಮದ್ದೂರು, ಜು.10: ಕೆ.ಆರ್.ಎಸ್. ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ, ಜಿಲ್ಲೆಯ ಕೆರೆಕಟ್ಟೆಗಳಿಗೆ ತುಂಬಿಸುವಂತೆ ಒತ್ತಾಯಿಸಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮದ್ದೂರು ಕೆರೆಯಂಗಳದಲ್ಲಿ ಅಹೋರಾತ್ರಿ ನಡೆಸುತ್ತಿರುವ ಧರಣಿ ನಾಲ್ಕನೆ ದಿನವಾದ ಸೋಮವಾರವೂ ಮುಂದುವರಿದಿದ್ದು, ಶಾಸಕ ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವು ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನೀರು ನಿಲ್ಲಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಧರಣಿನಿರತರು ಪಟ್ಟುಹಿಡಿದಿದ್ದು, ವಳೆಗೆರೆಹಳ್ಳಿ, ನಗರಕೆರೆ, ದೇಶಹಳ್ಳಿ, ಉಪ್ಪಿನಕೆರೆ ಗ್ರಾಮಸ್ಥರು, ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ನೀಡಿದರು.
ಬೆಂಬಲ ನೀಡಿದ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ, ತಾಲೂಕಿನ ಕೆರೆಕಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ತಮ್ಮನ್ನು ಪ್ರಶ್ನಿಸಿದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅವರಿಗೆ ಸ್ಪಷ್ಟಪಡಿಸಿದರು.
ಸದರಿ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವಿದೆ. ತಮಿಳುನಾಡಿಗೆ ನೀರುಹರಿಸುವುದನ್ನು ನಿಲ್ಲಿಸಿ ನಾಲೆಗಳಿಗೆ ನೀರು ಬಿಡಲು ಕ್ರಮವಹಿಸಲು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಜತೆ ಮಾತನಾಡುವುದಾಗಿ ಅವರು ಭರವಸೆ ನೀಡಿದರು.
ನಂಜಾವಧೂತ ಸ್ವಾಮೀಜಿ, ತಾಪಂ ಸದಸ್ಯ ಚಿಕ್ಕಮರಿಯಪ್ಪ, ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಗುಂಡ ಮಹೇಶ್, ಅಬಕಾರಿ ನಿಂಗೇಗೌಡ, ಕಾಳೀರಯ್ಯ, ಶಿವರಾಂ, ಯು.ಸಿ.ರವಿಗೌಡ, ತಮ್ಮಣ್ಣ, ವಳೆಗೆರೆಹಳ್ಳಿ ಶ್ರೀನಿವಾಸ್, ವಿನಯ್, ಅಂಬಿ, ಸುಧೀರ್, ಜಯರಾಮು, ಲೋಕೇಶ್, ಅವಿನಂದನ್, ವೀರಪ್ಪ, ಸಿದ್ದೇಗೌಡ, ವಾಸು, ನಂದ, ವೆಂಕಟೇಶ್‌ಬಾಬು ಇತರರು ಧರಣಿಯಲ್ಲಿ ಭಾಗವಹಿಸಿದ್ದರು.