ಸೌದಿ ದೊರೆ ಸಲ್ಮಾನ್‍ರಿಗೆ ಗೌರವ ಡಾಕ್ಟರೇಟ್

Update: 2017-07-13 10:03 GMT

ಜಿದ್ದ,ಜು.13: ಸೌದಿ ದೊರೆ ಸಲ್ಮಾನ್‍ರಿಗೆ ಇಮಾಂ ಮುಹಮ್ಮದ್ ಬಿನ್ ಸುಊದ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. ಪವಿತ್ರ ಕುರ್‍ಆನ್ ವಿಷಯದಲ್ಲಿ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾಕ್ಟರೇಟ್ ನೀಡುತ್ತಿರುವುದಾಗಿ  ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಸುಲೈಮಾನ್ ಬಿನ್ ಅಬ್ದುಲ್ಲ ಅಬಲ್‍ಖೈಲ್ ಹೇಳಿದರು.

ಜಿದ್ದಾದ ಅಸ್ಸಲಾಂ ಅರಮನೆಯಲ್ಲಿ ಡಾಕ್ಟರೇಟನ್ನು ದೊರೆ ಸಲ್ಮಾನ್ ರಿಗೆ ಪ್ರದಾನಿಸಿ ಗೌರವಿಸಲಾಯಿತು. ಮಾಜಿ ಹಣಕಾಸು ಸಚಿವ ಪಾರ್ಲಿಮೆಂಟ್ ಸದಸ್ಯರಾದ ಡಾ. ಇಬ್ರಾಹೀಂ ಅಲ್ ಅಸ್ಸಾಫ್, ವಿದೇಶ ಸಹ ಸಚಿವ ನಿಸಾರ್ ಉಬೈದ್ ಮದನಿ, ಶಿಕ್ಷಣ ಸಹಸಚಿವ ಡಾ. ಅಬ್ದುರ್ರಹ್ಮಾನ್ ಅಲ್‍ಆಸ್ಮಿ ಮುಂತಾದವರು ಸಮಾರಂಭದಲ್ಲಿ ಮಾತಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News