×
Ad

ಮಾದಕ ವಸ್ತುಗಳ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗದಂತೆ ನ್ಯಾಯಾಧೀಶರ ಕರೆ

Update: 2017-07-13 18:53 IST

ಚಿಕ್ಕಮಗಳೂರು, ಜು.13: ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕೆಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧಿಶ ಕೆ.ಎಲ್. ಅಶೋಕ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಗುರುವಾರ ಜಿಲ್ಲಾ ಕಾನೂನು ಸೇೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಕ್ಷಕ ಇಲಾಖೆ, ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ನಗರದ ಐ.ಡಿ.ಎಸ್.ಜಿ ಕಾಲೇಜು ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಮಾನಸಿಕ ಒತ್ತಡದಿಂದಾಗಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಾನೆ. ಕಾರಣ ಸಾಮಾಜಿಕ, ಸಾಂಸಾರಿಕ ಸಮಸ್ಯೆಗಳು, ಸಹವಾಸ ದೋಷ, ಅನುಕರಣೆಯಿಂದ ಇಂತಹ ವ್ಯಸನಕ್ಕೆ ಬಲಿಯಾಗುತ್ತಾರೆ. ಒಂದು ಬಾರಿ ಈ ವ್ಯಸನಕ್ಕೆ ಬಲಿಯಾದರೆ, ಇದರಿಂದ ಮುಕ್ತಿ ಪಡೆಯುವುದು ಕಷ್ಟ. ದೊಡ್ಡ ದೊಡ್ಡ ನಗರಗಳಲ್ಲಿ, ಮಾದಕ ವಸ್ತು ವ್ಯಾಪಾರಿಗಳು ಶಾಲಾ ಕಾಲೇಜುಗಳ ಸ್ಥಳಗಳಲ್ಲಿ, ಪ್ರಥಮವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿ ವಿದ್ಯಾರ್ಥಿಗಳನ್ನು ಮಾದಕ ವಸ್ತು ಚಟಕ್ಕೆ ಬಲಿಂಾಗುವಂತೆ ಮಾಡುತ್ತಾರೆ. ಮಾನಸಿಕ ಒತ್ತಡವಿದ್ದರೆ ತಮ್ಮ ಸ್ನೇಹಿತರೊಂದಿಗೆ, ಉಪನ್ಯಾಸಕರೊಂದಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.

ಪ್ರಾನ ಹಿರಿಯ ಸಿವಿಲ್ ನ್ಯಾಯಾಧಿಶ ಬಸವರಾಜ್ ಚೇಂಗಟ್ಟಿ ಮಾತನಾಡಿ, ವಿಶ್ವ ಸಂಸ್ಥೆಯು 1987 ರ ಜೂನ್ 26 ನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನವನ್ನಾಗಿ ಆಚರಿಸಲು ಕಾನೂನು ರೂಪಿಸಿತು. ಅಂದಿನಿಂದ ಈ ದಿನವನ್ನು ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೊೀಧ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪೋಷಕರು ತಮ್ಮ ಮಕ್ಕಳ ಸಮಸ್ಯೆಗಳನ್ನು ತಿಳಿದು ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಮಾದಕ ವಸ್ತುಗಳನ್ನು ತಯಾರಿಸುವುದು, ಮಾರಾಟ ಮಾಡು ವುದು ಶಿಕ್ಷಾರ್ಹ ಅಪರಾಧವಾಗಿದೆ. ಸೆರೆಮನೆವಾಸ ಹಾಗೂ ದಂಡ ವಿಧಿಸಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಅಪಾರ ಶಕ್ತಿ ಇದೆ. ಯುವ ಶಕ್ತಿ ಈ ದೇಶವನ್ನು ಮುನ್ನಡೆಸಲು ಮುಂದಾಗಬೇಕು.ತಮ್ಮಲ್ಲಿರುವ ಉತ್ತಮ ಗುಣಗಳನ್ನು ಹೊರ ಹಾಕಿದಾಗ ಮಾತ್ರ ತಾವು ಒಂದು ಶಿಲ್ಪವಾಗಲು ಸಾಧ್ಯ ಎಂದರು.

ವಕೀಲ ವೆಂಕಟೇಶ್ ಅವರು ರ್ಯಾಗಿಂಗ್ ಹಾಗೂ ಅದರ ದುಷ್ಟರಿಣಾಮಗಳ ಕುರಿತು, ಮಾನಸಿಕ ರೋಗ ತಜ್ಞ ಡಾ.ವಿನಯ್ ಕುಮಾರ್ ಅವರು ಮಾದಕ ವಸ್ತು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಟರಿಣಾಮಗಳು ಹಾಗೂ ಅಕ್ರಮ ಕಳ್ಳಸಾಗಾಣಿಕೆ ತಡೆ ಕುರಿತು ಉಪನ್ಯಾಸ ನೀಡಿದರು.  ಐ.ಡಿ.ಎಸ್.ಜಿ. ಕಾಲೇಜಿನ ಪ್ರಾಂಶುಪಾಲ ಟಿ.ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಕಿರಣ್, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕ ಶೀನಿವಾಸ, ವಕೀಲರ ಸಂಘದ ಕಾರ್ಯದರ್ಶಿ ಹೆಚ್. ಎಂ. ಕೃಷ್ಣೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News