×
Ad

2 ವರ್ಷದ ಅವಧಿಯಲ್ಲಿ ಜಿಲ್ಲೆಯೊಳಗೆ ಎಂದೆಂದೂ ಕಾಣದ ಅಭಿವೃದ್ಧಿ: ಎ.ಮಂಜು

Update: 2017-07-14 19:53 IST

ಹಾಸನ, ಜು.14: ನನ್ನ ಎರಡು ವರ್ಷದ ಅಧಿಕಾವಧಿಯಲ್ಲಿ ಜಿಲ್ಲೆಯಲ್ಲಿ ಎಂದೆಂದೂ ಆಗದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿರುಗೇಟು ನೀಡಿದರು.
        
ತಾಲೂಕಿನ ಗೊರೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅತಿಹೆಚ್ಚು ಅಧಿಕಾರ ಅನುಭವಿಸಿರುವ ಕುಟುಂಬ ಇದ್ದರೇ ಅದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬವಾಗಿದೆ. ಈಗಲಾದರೂ ಜಿಲ್ಲೆಯು ಅಭಿವೃದ್ಧಿಯಾಗಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಎಂದು ಅಭಿವೃದ್ಧಿ ಆಗದ ಕೆಲಸವನ್ನು ನನ್ನ ಎರಡು ವರ್ಷದ ಅಧಿಕಾರವಧಿಯಲ್ಲಿ ಮಾಡಲಾಗಿದೆ ಎಂದು ಮಾತಿನ ಚಾಟಿ ಬೀಸಿದರು.

ಈ ಬಗ್ಗೆ ಅತಿ ಶೀಘ್ರದಲ್ಲಿಯೇ ಶ್ವೇತ ಪತ್ರ ಹೊರಡಿಸಲಾಗುವುದಾಗಿ ಹೇಳಿದರು. ಗೊರೂರಿನ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ದೇವೇಗೌಡರು, ಮತ್ತು ಅವರ ಕುಟುಂಬ ಅನುಭವಿಸಿರುವಷ್ಟು ಅಧಿಕಾರವಧಿ ಸಿಕ್ಕಿಲ್ಲ. ಅವರೇ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ಅವರು ಹಿರಿಯ ಮತ್ತು ಮುತ್ಸದ್ದಿ ರಾಜಕಾರಣಿಯಾಗಿದ್ದು, ನಮ್ಮಂತಹವರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಜಿಲ್ಲಾಡಳಿತ ಕುಸಿತ ಕಂಡಿದೆ ಎಂದು ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನನ್ನ ಎರಡು ವರ್ಷದ ಅಧಿಕಾವಧಿಯಲ್ಲಿ ಜಿಲ್ಲೆಯಲ್ಲಿ ಎಂದೆಂದೂ ಆಗದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಜಿಲ್ಲಾಡಳಿತ ಎಂದೂ ಕೂಡ ಕುಸಿತ ಕಂಡಿಲ್ಲ. ಈ ವಿಚಾರವಾಗಿ ಅಧಿಕಾರಿಗಳು ಹೇಳಿದರೆ ನಾನು ತಕ್ಷಣವೇ ರಾಜಿನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು. ಜಿಲ್ಲಾಡಳಿತ ಕುಸಿತ ಕಂಡಿದ್ದರೇ ಹಿರಿಯರಾದ ನೀವು ನನಗೆ ನಿರ್ದೇಶನ ನೀಡಬಹುದಿತ್ತು. ಆದರೇ ಈಗ ಮಾಡುತ್ತಿರುವುದು ಕೇವಲ ಚುನಾವಣೆಯನ್ನು ಮುಂದಿಟ್ಟುಕೊಂಡು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುವುದು ಕಂಡು ಬರುತ್ತಿದೆ ಎಂದರು.

ದೇವೇಗೌಡರು ಮುಖ್ಯ ಮಂತ್ರಿಯಾಗಿ, ಪ್ರಧಾನಿಯಾಗಿ, ಅವರ ಮಕ್ಕಳು ಮುಖ್ಯ ಮಂತ್ರಿಯಾಗಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಲಾಗದೇ ಇದ್ದವರು ಈಗ ಅಭಿವೃದ್ಧಿ ಪಡಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದ ಎ. ಮಂಜು, ಇವರ ಅವಧಿಯಲ್ಲಿ ಕೇವಲ ಹೊಳೆನರಸೀಪುರ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿತ್ತು. ಈಗ ಮಾತನಾಡುವ ದೇವೆಗೌಡರು, ಅವಕಾಶ ಸಿಕ್ಕಿದಾಗ ಜಿಲ್ಲೆಯನ್ನು ಯಾಕೆ ಅಭಿವೃದ್ಧಿ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು. ಅಭಿವೃದ್ಧಿಗೆ ನಾನು ಬಂದಾಗ ಅದಕ್ಕೆ ಸ್ವಾಗತಿಸಬೇಕು ಎಂದು ಹೇಳಿದರು.
ಇದೆ ವೇಳೆ ಹೇಮಾವತಿ ಜಲಾಶಯದ ಇಂಜಿನಿಯರ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News