×
Ad

ಚಾಮೂಲ್ ಕಟ್ಟಡ ನಿರ್ಮಾಣ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-07-15 18:52 IST

ಚಾಮರಾಜನಗರ, ಜು. 15: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ನೂತನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ, ಉದ್ದೇಶಿಸಿತ ಟಾಟ್ರಾ ಪ್ಯಾಕೇಟ್ ಯುನಿಟ್ ಹಾಗು ಹಾಲು ಸಂಸ್ಕರಣ ಘಟಕ ನಿರ್ಮಾಣಕ್ಕೆ ಅತ್ಯವಶ್ಯಕವಾಗಿರುವ 56 ಕೋಟಿ ರೂ.ಗಳನ್ನು ತಕ್ಷಣದಲ್ಲಿಯೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ಕುದೇರಿನಲ್ಲಿರುವ ಹಾಲು ಒಕ್ಕೂಟಕ್ಕೆ ಶುಕ್ರವಾರ ಭೇಟಿ ನೀಡಿ, ಒಕ್ಕೂಟದ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಇದೇ ಸಂದರ್ಭದಲ್ಲಿ ಒಕ್ಕೂಟದ ನೂತನ ಅಧ್ಯಕ್ಷ ಸಿ.ಎಸ್. ಗುರುಮಲ್ಲಪ್ಪ ಮುಖ್ಯಮಂತ್ರಿಗಳನ್ನು ಅಭಿನಂದಿಸಿ, ಒಕ್ಕೂಟದ ಕಾಮಗಾರಿಗಳು ಪೂರ್ಣಗೊಳ್ಳಲು ಅನುದಾನ ಕೊರತೆ ಇದೆ ಎಂದು ಮನವಿ ಮಾಡಿಕೊಂಡರು.
 
ಇದಕ್ಕೆ ಪೂರಕವಾಗಿ ಸಂಸದ ಆರ್. ಧ್ರುವನಾರಾಯಣ್, ನರೇಂದ್ರ, ಜಯಣ್ಣ, ಪುಟ್ಟರಂಗಶೆಟ್ಟಿ ಅವರು ಧ್ವನಿಗೂಡಿಸಿ ಪ್ರತ್ಯೇಕ ಒಕ್ಕೂಟ ರಚನೆಯ ಮೂಲಕ ದಿ. ಮಹದೇವಪ್ರಸಾದ್ ಅವರು ಹೆಚ್ಚಿನ ಶ್ರಮ ವಹಿಸಿ ಯೋಜನೆಗಳನ್ನು ರೂಪಿಸಿದ್ದಾರೆ. ಇದರ ಮುಂದುವರಿದ ಭಾಗದ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲು 56 ಕೋಟಿ ರೂ.ಗಳು ಬೇಕಾಗಿದೆ. ತಾವು ಮನಸ್ಸು ಮಾಡಬೇಕು ಎಂದು ಕೇಳಿ ಕೊಂಡರು.

 ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಬಳಿಕ ಅವರು, ಕಟ್ಟಡ ಬಹಳ ಸುಂದರವಾಗಿ ಮೂಡಿರುತ್ತಿದೆ. ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿದೆ. ಸದ್ಯದಲ್ಲೇ ಇನ್ನುಳಿದ 56 ಕೋಟಿ ರೂ.ಗಳನ್ನ ನೀಡುವುದಾಗಿ ತಿಳಿಸಿದರು.  ಹಾಲು ಉತ್ಪಾದಕ ರೈತರಿಗೆ ಅನುಕೂಲವಾಗುವ ಸಹಕಾರ ಒಕ್ಕೂಟದ ಬಲವರ್ಧನೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಈಗಾಗಲೇ ಉತ್ಪಾಧಕರಿಗೆ 5 ರೂ.ಗಳ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿ ರೈತರು ಅಭಿವೃದ್ದಿ ಹೊಂದಬೇಕು. ಇಲ್ಲಿಯ ಯುವಕರಿಗೆ ಉದ್ಯೋಗ ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಳಿಕ ಒಕ್ಕೂಟದ ಕಚೇರಿ ಸಭಾಂಣಗದಲ್ಲಿ ಭೋಜನ ಸವಿದರು. ಸ್ವಲ್ಪ ಕಾಲ ವಿಶ್ರಾಂತಿ ಪಡೆದುಕೊಂಡು ಉಮ್ಮತ್ತೂರಿನಲ್ಲಿ ನಡೆಯುವ ಸಮಾರಂಭಕ್ಕೆ ಆಗಮಿಸಿದರು. ಇವರೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಚ.ನಗರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಎಸ್. ಜಯಣ್ಣ, ಆರ್. ನರೇಂದ್ರ, ಕೆಎಂಎಫ್ ನಿರ್ದೇಶಕ ತೋಟೇಶ್, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ನಿದೇರ್ಶಕರಾದ ನಂಜುಂಡ ಪ್ರಸಾದ್, ನಂಜುಂಡ ಸ್ವಾಮಿ, ಕಣ್ಣೇಗಾಲಸ್ವಾಮಿ, ಮಾದಪ್ಪ, ಕಿಲಗೆರೆ ಬಸವರಾಜು, ಎಂ.ಎಸ್. ರವಿಶಂಕರ್, ಪ್ರಮೋದ ಶಂಕರಮೂರ್ತಿ,ಮುಕುಂದವರ್ಮ, ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ಇದ್ದರು.

     
 
       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News