ಸಾಹಿತಿ ಜ.ಹೋ. ನಾರಾಯಣಸ್ವಾಮಿಗೆ 75ನೇ ಹುಟ್ಟುಹಬ್ಬ
ಹಾಸನ, ಜು.16: ಹೆಸರಾತ ಸಾಹಿತಿ ಜ.ಹೋ. ನಾರಾಯಣಸ್ವಾಮಿಗೆ 75ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಮಹಾರಾಜ ಉದ್ಯಾನವನದಲ್ಲಿರುವ ಯೋಗಾ ಶಾಲೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಲಾಯಿತು.
ನಂತರ ಮಾತನಾಡಿದ ಸಾಹಿತಿ ಜ.ಹೋ. ನಾರಾಯಣಸ್ವಾಮಿ ಅವರು, ಸಾಹಿತ್ಯ ಎಂಬುದು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಂತಿರಬೇಕು. ಆಂತರಿಕ ಅರಿವು ಆಗುತ್ತಿಲ್ಲ ಎಂಬುದು ಎಲ್ಲರನ್ನು ಕಾಡುತ್ತಿದೆ. ಸ್ವಾರ್ಥ ರಹಿತವಾಗಿ ಪ್ರೀತಿಯನ್ನು ಹತ್ತಿರಮಾಡಿಕೊಂಡು ಸಾಹಿತ್ಯ ರಚಿಸುವುದು ಉತ್ತಮವಾಗಿರುತ್ತದೆ ಎಂದರು. ಆದರೇ ನಾವೆಲ್ಲಾ ಭ್ರಮೆಯಲ್ಲಿ ನರಳುತಿದ್ದೇವೆ. ವಿವೇಕಾನಂದರ ಆದರ್ಶವನ್ನು ನಾವು ಬೆಳೆಸಿಕೊಳ್ಳಬೇಕು. ಒಳಗಿರುವ ಹೃದಯ ಚೇತನ ಅನನ್ಯವಾಗಬೇಕು ಎಂದು ಕಿವಿಮಾತು ಹೇಳಿದರು. ವಿಚಾರವಿಲ್ಲದೆ ವಿಮೋಚನೆ ಸಿಗುವುದಿಲ್ಲ. ತಮ್ಮೊಳಗೆ ಇರುವ ವಿಚಾರವನ್ನು ಬರಹ ಮೂಲಕ ಹೊರ ತಂದರೇ ವ್ಯಕ್ತಿ ವಿಕಸನವಾಗುತ್ತದೆ. ಸಾಹಿತಿ ಕುವೆಂಪು ಹೇಳುವಂತೆ ನಾವು ನಡೆದುಕೊಂಡರೇ ಜೀವನ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್ ಮಾತನಾಡಿ, ಕುವೆಂಪು ಅವರು ಒಂದು ಧರ್ಮಕ್ಕೆ ಮಾತ್ರ ಸಾಹಿತ್ಯ ನೀಡಲಿಲ್ಲ. ಎಲ್ಲಾ ವರ್ಗದವರ ಹಿತಾದೃಷ್ಠಿಯಲ್ಲಿ ಕೊಡುಗೆಯಾಗಿ ನೀಡಿದ್ದಾರೆ. ಭಾರತ ದೇಶದಲ್ಲಿ ಹಲವು ಹಬ್ಬವನ್ನು ಆಚರಿಸುತ್ತೇವೆ. ಹಿಂದಿನ ಪುರಾತನದಿಂದ ಬಂದ ಸಂಸ್ಕೃತಿಯನ್ನು ಇಂದಿಗೂ ಆಚರಿಸುತ್ತಿದ್ದೇವೆ. ಸಾಹಿತಿ ಜ.ಹೋ. ನಾರಾಯಣಸ್ವಾಮಿ ಅವರ ಸಾಹಿತ್ಯ ಮುಂದಿನ ಪೀಳಿಗೆಗೆ ಅತ್ಯವಶ್ಯಕವಾಗಿದೆ. ಅವರು ಆರೋಗ್ಯ, ಸಂತೋಷದಿಂದ ಇನ್ನು ಹೆಚ್ಚಿನ ವರ್ಷ ಬಾಳಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಲೋಪತಿ ವೈದ್ಯಕೀಯ ಸೇವೆ ಸಲ್ಲಿಸಿದ ಅರುಣಚಲಂ ಅವರನ್ನು ಕೂಡ ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಯೋಗಾ ಗುರುಗಳು ಹಾಗೂ ಶಿಕ್ಷಕರು ಮನೋಹರ್, ವಿಶ್ವನಾಥ್, ಜಯಚಂದ್ರಗುಪ್ತ, ಸಯ್ಯದ್ ಸಗಬೂಬ್, ಚಿತ್ರಕಲಾ ಶಿಕ್ಷಕ ದೇಸಾಯಿ, ಜನತಾ ಮಾಧ್ಯಮ ದಿನಪತ್ರಿಕೆ ಸಂಪಾದಕ ಮಂಜುನಾಥ್ ದತ್ತ, ಸಮಾಜ ಸೇವಕ ಮಹಂತಪ್ಪ ಇತರರು ಇದ್ದರು. ಈಶ್ವರ್ ನಿರೂಪಿಸಿದರು.