×
Ad

ಕಡಂಗದಲ್ಲಿ ಗಮನ ಸೆಳೆದ ಕೆಸರು ಗದ್ದೆ ಕ್ರೀಡಾಕೂಟ

Update: 2017-07-16 17:06 IST

ಮಡಿಕೇರಿ, ಜು.16: ಕಡಂಗದ ಪೊದ್ದುಮಾನಿ ಗ್ರಾಮದ ಅನ್ನಂಬಿರ ಅಪ್ಪಚ್ಚು ಮತ್ತು ಸಹೋದರರ ಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೊಡಗು ಕಪ್ 2017 ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು.  ಕೆಸರು ಗದ್ದೆಯಲ್ಲಿ ಓಟ, ಫುಟ್‌ಬಾಲ್ ಆಟ ಸೇರಿದಂತೆ ವೈವಿಧ್ಯಮಯ ಗ್ರಾಮೀಣ ಕ್ರೀಡೆಗಳು ಎರಡು ದಿನಗಳ ಕಾಲ ನಡೆಯಿತು. ವಿವಿಧ ಭಾಗಗಳ ಸುಮಾರು 40 ಕ್ಕೂ ಹೆಚ್ಚು ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.

ಶಾಸಕರಾದ ಕೆ.ಜಿ.ಬೋಪಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮುಕ್ಕಾಟಿರ ಶಿವು ಮಾದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಿ.ಬಿ.ಭಾರತೀಶ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಸ್ಥಳೀಯ ಜಿ.ಪಂ ಸದಸ್ಯರಾದ ಕಿರಣ್ ಕಾರ್ಯಪ್ಪ ಮತ್ತಿತರ ಪ್ರಮುಖರು ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಇದೇ ಸಂದರ್ಭ ಪದ್ಮಿನಿ ಪೊನ್ನಪ್ಪ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News