×
Ad

ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ಏರಿಕೆ

Update: 2017-07-16 17:16 IST

ಶಿವಮೊಗ್ಗ, ಜು. 16: ಮಲೆನಾಡಿನಲ್ಲಿ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಕೆಲವೆಡೆ ಸಾಧರಣ ಮಳೆಯಾಗುತ್ತಿದ್ದರೆ, ಮತ್ತೆ ಹಲವೆಡೆ ಉತ್ತಮ ವರ್ಷಧಾರೆಯಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವ ಕಾರಣದಿಂದ ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. 
ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವು 11,540 ಕ್ಯೂಸೆಕ್‍ಗೆ ಏರಿಕೆಯಾಗಿದೆ. ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. 1765.25 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1777.10 ಅಡಿ ನೀರು ಸಂಗ್ರಹವಾಗಿತ್ತು. 
ಭದ್ರಾ ಡ್ಯಾಂನ ನೀರಿನ ಮಟ್ಟ 127.5 (ಗರಿಷ್ಠ ಮಟ್ಟ : 186) ಅಡಿ ನೀರಿದೆ. 3747 ಕ್ಯೂಸೆಕ್ ಒಳಹರಿವಿದೆ. ಮಾಣಿ ಡ್ಯಾಂನ ನೀರಿನ ಮಟ್ಟ 1911.57 (ಗರಿಷ್ಠ ಮಟ್ಟ : 1952) ಅಡಿಯಿದ್ದು, 2498 ಕ್ಯೂಸೆಕ್ ಒಳಹರಿವಿದೆ. ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ಭರ್ತಿಯಾಗಿದೆ. ಪ್ರಸ್ತುತ ಡ್ಯಾಂಗೆ 6321 ಕ್ಯೂಸೆಕ್ ಒಳಹರಿವಿದ್ದು, 4647 ಕ್ಯೂಸೆಕ್ ಹೊರಹರಿವಿದೆ. 
ಮಳೆ ವಿವರ: ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಶಿವಮೊಗ್ಗದಲ್ಲಿ 1. 8 ಮಿ.ಮೀ., ಭದ್ರಾವತಿಯಲ್ಲಿ 10 ಮಿ.ಮೀ., ತೀರ್ಥಹಳ್ಳಿಯಲ್ಲಿ 25 ಮಿ.ಮೀ., ಶಿಕಾರಿಪುರ 1.5 ಮಿ.ಮೀ., ಸಾಗರ 10 ಮಿ.ಮೀ., ಸೊರಬ 6.5 ಮಿ.ಮೀ., ಹೊಸನಗರ 20.5 ಮಿ.ಮೀ., 
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಆಗುಂಬೆಯಲ್ಲಿ 86 ಮಿ.ಮೀ., ಮಾಣಿಯಲ್ಲಿ 92 ಮಿ.ಮೀ., ಯಡೂರಿನಲ್ಲಿ 96 ಮಿ.ಮೀ., ಹುಲಿಕಲ್‍ನಲ್ಲಿ 85 ಹಾಗೂ ಮಾಸ್ತಿಕಟ್ಟೆಯಲ್ಲಿ 85 ಮಿ.ಮೀ. ವರ್ಷಧಾರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News