ಲಾರಿ ಮಗುಚಿ ಬಿದ್ದು ಇಬ್ಬರು ಮೃತ್ಯು
Update: 2017-07-16 18:18 IST
ಚನ್ನಗಿರಿ,ಜು.16:ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನಪ್ಪಿದ ಘಟನೆ ತಾಲೂಕಿನ ಬಸಾಪುರ ಗ್ರಾಮದ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಕೆರೆಬಿಳಚಿ ಗ್ರಾಮದಿಂದ ಚನ್ನಗಿರಿ ಮಾರ್ಗವಾಗಿ 3 ಲಾರಿಗಳು ಅತಿವೇಗವಾಗಿ ಚಲಿಸುತ್ತಿದ್ದಾಗ ಒಂದು ಲಾರಿ ಬಸಾಪುರ ಗ್ರಾಮದ ಬಳ್ಳಿ ಪಲ್ಟಿಯಾಗಿದೆ. ಪರಿಣಾಮ, ಕೂಲಿ ಕೆಲಸಕ್ಕೆಂದು ಲಾರಿಯಲ್ಲಿ ಹೋಗುತ್ತಿದ್ದ ಸೋಮಲಾಪುರ ಗ್ರಾಮದ ರವಿ (45) ಹಾಗೂ ಹಾಲೇಶ್ (23) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಚನ್ನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.