ಪರಪ್ಪನ ಅಗ್ರಹಾರ ಕಾರಾಗೃಹ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಎತ್ತಂಗಡಿ
Update: 2017-07-17 16:36 IST
ಬೆಂಗಳೂರು, ಜು.17: ಅವ್ಯವಹಾರದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್ ಅವರನ್ನು ವರ್ಗಾಯಿಸಲಾಗಿದ್ದು, ತೆರವಾದ ಜಾಗಕ್ಕೆ ಅಧೀಕ್ಷಕಿ ಡಾ.ಅನಿತಾ ರೈ ಅವರನ್ನು ನಿಯೋಜಿಸಲಾಗಿದೆ.
ಕೃಷ್ಣ ಕುಮಾರ್ ಅವರಿಗೆ ಸ್ಥಳ ನಿಗದಿ ಮಾಡದೆ ಎತ್ತಂಗಡಿ ಮಾಡಲಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹದ ಅಧೀಕ್ಷಕಿ ಡಾ.ಅನಿತಾ ರೈ ಪ್ರಭಾರ ಮುಖ್ಯ ಅಧೀಕ್ಷಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.