×
Ad

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಭೆ

Update: 2017-07-17 18:02 IST

ಹನೂರು, ಜು. 17: ನರೇಗಾ ಯೋಜನೆಯಡಿ 2017-18 ಅವಧಿಯಲ್ಲಿ 127ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು 36 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಾಲ್ಲೂಕು ಸಂಯೋಜಕ ಮನೋಹರ್‌ ಮಾಹಿತಿ ನೀಡಿದರು.

ಕ್ಷೇತ್ರ್ರ ವ್ಯಾಪಿಯ ಅಜ್ಜಿಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 2017-18ನೇ ಸಾಲಿನ ಮಾದಲನೇ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನನಾ  ಸಭೆಯಲ್ಲಿ ಮಾತನಾಡಿದ ಮನೋಹರ್, ನರೇಗಾ ಯೋಜನೆಯಡಿ ಉದ್ಯೋಗ ಕೇಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಈ ಯೋಜನೆಯಡಿ ಉದ್ಯೋಗ ಪಡೆದ ಪ್ರತಿಯೊಬ್ಬರಿಗೂ ಪ್ರತಿದಿನ ರೂ. 236 ದಿನಗೂಲಿ ನೀಡಲಾಗುತ್ತಿದೆ. ಒಂದೊಮ್ಮೆ ಗ್ರಾಮಸ್ಥರು ಉದ್ಯೋಗ ಕೇಳಿಯೂ ಪಂಚಾಯತ್  ವತಿಯಿಂದ ಉದ್ಯೋಗ ನೀಡಲಾಗದಿದ್ದ ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುವುದು. ಆದುದರಿಂದ ಪ್ರತಿಯೊಬ್ಬರೂ ಉದ್ಯೋಗ ಚೀಟಿಯ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಜಾಬ್‌ ಕಾರ್ಡ್ ಪಡೆಯದೇ ಇದ್ದವರು ಹೊಸದಾಗಿ ಜಾಬ್‌ಕಾರ್ಡ್ ಪಡೆಯಲು ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು ಆಧಾರ್‌ ಕಾರ್ಡ್ ಸಮೇತ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಮಾದಲನೆ ಅವದಿಯಲ್ಲಿ 127 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 36 ಲಕ್ಷ ರೂ. ಖರ್ಚು ಮಾಡಲಾಗಿದ್ದು 26 ಲಕ್ಷ ರೂ. ಕೂಲಿ ಪಾವತಿ ಮಾಡಲಾಗಿದ್ದು, ಸಾಮಾಗ್ರಿಗಳಿಗಾಗಿ 9 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ಸಂಬಂಧ 5 ಜನರ ಪರಿಶೊಧಕರ ತಂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೂ ತೆರಳಿ ಕಾಮಗಾರಿಗಳ ಲೋಪದೋಷ ಮತ್ತು ಅಹವಾಲುಗಳು ಹಾಗೂ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಒಟ್ಟು 302 ಉದ್ಯೋಗ ಚೀಟಿಗಳನ್ನು ಕುಟುಂಬಗಳಿಗೆ ವಿತರಣೆ ಆಗಿದೆ ಎಂದು ತಿಳಿಸಿದರು. ಗ್ರಾಮಸ್ಥರಿಂದ ದೂರು: ಇದೇ ವೇಳೆ ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೆಲಸಗಳು ನೆಡೆಯದೆ ಬಿಲ್ ಮಾಡಲಾಗಿದೆ ಹಾಗೂ ಹೆಚ್ಚಿನ ಕಾಮಗಾರಿಗಳು ಯಂತ್ರೋ ಪಕರಣಗಳಿಂದ ಬಳಕೆ ಮಾಡಿ ಬಿಲ್ ಮಾಡಲಾಗಿದೆ. ಪಂಚಾಯತ್ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸದಸ್ಯರ ನಡುವಿನ ಹೊಂದಾಣಿಕೆಯ ಕೊರೆತೆಯಿಂದ  ಪಂಚಾಯತ್ ವ್ಯಾಪ್ತಿಯಲ್ಲಿ 86 ಮನೆಗಳು ಮಂಜೂರಾದರೂ ಸಹ ಅದು ಇದುವರೆಗೂ  ಗ್ರಾಮಸ್ಥರಿಗೆ ಹಂಚಿಕೆಯಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News