×
Ad

ನಾಲ್ವರು ಬ್ಯಾಟರಿ ಕಳ್ಳರ ಬಂಧನ

Update: 2017-07-17 20:41 IST

ಮಂಡ್ಯ, ಜು.17: ಗೂಡ್ಸ್ ಆಟೋ ಮತ್ತು ಟ್ರ್ಯಾಕ್ಟರ್ ಬ್ಯಾಟರಿಯನ್ನು ಕಳವು ಮಾಡುತ್ತಿದ್ದ ನಾಲ್ವರು ಅರೋಪಿಗಳನ್ನು ಬಂಧಿಸಿರುವ ಬೆಳಕವಾಡಿ ಪೊಲೀಸರು, ಬಂಧಿತರಿಂದ 2.08 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಕೊಳತ್ತೂರು ಗ್ರಾಮದ ಮನು(20), ಸ್ವಾಮಿ(25), ರಮೇಶ(28) ಹಾಗೂ ಮಳವಳ್ಳಿ ತಾಲೂಕಿನ ಜವನಗಹಳ್ಳಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ನವೀನ್(24) ಬಂಧಿತ ಆರೋಪಿಗಳಾಗಿದ್ದಾರೆ.

ಡಿವೈಎಸ್ಪಿ ಮ್ಯಾಥ್ಯೂಥಾಮಸ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶ್ರೀಕಾಂತ್ ನೇತೃತ್ವದಲ್ಲಿ ಎ.ಎಸ್.ಐ.ನಿಂಗಣ್ಣ, ಮರಿಸ್ವಾಮಿ, ಸಿಬ್ಬಂದಿಗಳಾದ ಅಂಜನಮೂರ್ತಿ, ಚೌಡಶೆಟ್ಟಿ, ಪ್ರಭುಸ್ವಾಮಿ, ಮೋಹನ್, ಕುಮಾರ್, ರಿಯಾಜ್, ಪಾಷ, ಮಹದೇವು, ಧನಂಜಯ ಕಾರ್ಯಾಚರಣೆಯಲ್ಲಿ ಬಾಗವಹಿಸಿ ಅರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News