×
Ad

ಚಂದಕವಾಡಿಯಲ್ಲಿ ವಾಟಾಳ್‌ರಿಂದ ಗ್ರಾಮೀಣ ಅಭಿವೃದ್ಧಿ ಸಮ್ಮೇಳನ

Update: 2017-07-18 19:31 IST

ಚಾಮರಾಜನಗರ, ಜು.18: ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ವತಿಯಿಂದ ಮಾಜಿ ಶಾಸಕ ವಾಟಾಳ್ ನಾಗರಾಜು ನೇತೃತ್ವದಲ್ಲಿ ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಗಡಿನಾಡಿನ ಗ್ರಾಮೀಣ ಅಭಿವೃದ್ಧಿ ಸಮ್ಮಳನ ನಡೆಯಿತು. ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದ ಗ್ರಾಮೀಣ ಅಭಿವೃದ್ಧಿ ಸಮ್ಮೇಳನವನ್ನು ಮಾಜಿ ಶಾಸಕ ವಾಟಾಳ್ ನಾಗರಾಜು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾ ಟನೆ ಮಾಡಿದರು.

ಮಾಜಿ ಶಾಸಕ ವಾಟಾಳ್ ನಾಗರಾಜು ಮಾತನಾಡಿ, ಸರ್ಕಾರಗಳು ನಗರ ಪ್ರದೇಶಗಳ ಅಭಿವೃ ದ್ಧಿಗೆ ಹೆಚ್ಚು ಆಧ್ಯತೆ ನೀಡುತ್ತಿವೆ. ನಗರ ಪ್ರದೇಶಗಳಿಗೆ ಆದ್ಯತೆ ನೀಡುವಂತೆ ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡಿ ವಿಶೇಷ ಆಯವ್ಯಯ ಮಂಡಿಸಬೇಕು ಜೊತೆಗೆ ಗ್ರಾಮೀಣ ಅಭಿವೃದ್ಧಿಗಾಗಿ ವಿಶೇಷ ಸಮಿತಿ ರಚನೆಯಾಗಬೇಕು ಎಂದು ಆಗ್ರಹಿಸಿದರು.

ಜನರಿಗಾಗಿ 50 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಕೊನೆಯ ಉಸಿರಿರೊವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದ ಅವರು,ನನ್ನ ಹೋರಟದಿಂದ ಇಂದು ಚಾಮರಾಜನಗರ ಜಿಲ್ಲೆಯಾಗಿದೆ. ಅಲ್ಲದೆ ಟಿ.ನರಸಿಪುರದಿಂದ ಚಾಮರಾಜನಗರಕ್ಕೆ ಕುಡಿಯಲು ಕಾವೇರಿ ನೀರು ತಂದವನು ನಾನು ಎಂದು ಹೇಳಿದರು.
ಚಾಮರಾಜನಗರದ ಅಭಿವೃದ್ಧಿಗಾಗಿ ಈ ಬಾರಿ ಚುನಾವಣೆ ಯಲ್ಲಿ ನನ್ನನ್ನು ಬೆಂಬಲಿಸುವಂತೆ ವಾಟಾಳ್ ನಾಗರಾಜು ಮನವಿ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News