ದೇವಸ್ಥಾನ ಬಳಿ ಜೂಜಾಟ : ಪೊಲೀಸರ ದಾಳಿ
ಗುಂಡ್ಲುಪೇಟೆ, ಜು.18: ತಾಲೂಕಿನ ಹಂಗಳ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದ ಪಟ್ಟಣ ಪೊಲೀಸರು ಮೂವರು ಆರೋಪಿಗಳು ಹಾಗೂ ಪಣಕ್ಕಿಟ್ಟಿದ್ದ 4080 ರೂ. ವಶಕ್ಕೆ ಪಡೆದಿದ್ದಾರೆ.
ದಾಳಿ ಕಾರ್ಯಾಚರಣೆಯಲ್ಲಿ ವೃತ್ತನಿರೀಕ್ಷಕ ಕೆ.ವಿ.ಕೃಷ್ಣಪ್ಪ, ಪಿ.ಎಸ್.ಐ.ಶಿವರುದ್ರಪ್ಪ, ಅಪರಾಧ ವಿಭಾಗದ ಪಿ.ಎಸ್.ಐ ದಾಸಪ್ಪ, ಸಿಬ್ಬಂದಿಗಳಾದ ಬಂಟಪ್ಪ, ಲಿಂಗರಾಜು, ಶಿವರಾಜು ಚಾಲಕ ಕುಮಾರ್, ಮಹದೇವಸ್ವಾಮಿ ಇದ್ದರು.
ಮತ್ತೊಂದು ಪ್ರಕರಣದಲ್ಲಿ ಜಿಲ್ಲಾ ಅಪರಾಧ ತಡೆ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ತೆರಕಣಾಂಬಿ ಪೊಲೀಸ್‌ಠಾಣಾ ವ್ಯಾಪ್ತಿಯ ಬೆರಟಳ್ಳಿ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 10 ಜನರನ್ನು ವಶಕ್ಕೆ ಪಡೆದು ಪಣಕ್ಕಿಟ್ಟದ್ದ 12,500 ರೂಪಾಯಿ ಹಾಗೂ ಆರೋಪಿಗಳನ್ನು ತೆರಕಣಾಂಬಿ ಠಾಣೆಗೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಮಹದೇವಶೆಟ್ಟಿ, ಸಿಬ್ಬಂದಿಗಳಾದ ಹೆಚ್.ಡಿ.ಸ್ವಾಮಿ, ಸಿದ್ದಲಿಂಗಸ್ವಾಮಿ, ರವಿ, ಮಹೇಶ್, ಶ್ರೀನಿವಾಸಮೂರ್ತಿ, ಮಲ್ಲಿಕಾ, ಜಯಪ್ರಕಾಶ್ ಹಾಗೂ ಮಹದೇವಸ್ವಾಮಿ ಇದ್ದರು.