ಗುಂಡ್ಲುಪೇಟೆ: ಮೂವರ ನಾಪತ್ತೆ
Update: 2017-07-18 19:36 IST
ಗುಂಡ್ಲುಪೇಟೆ, ಜು.18: ಪಟ್ಟಣದ ಕುರುಬಗೇರಿಯ ಮದನ್ ಬಿನ್ ಮರಿಯಪ್ಪ (29) ಕಾಣೆಯಾಗಿದ್ದಾರೆ ಎಂದು ಪತ್ನಿ ಶೃತಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಂಗಳ ಗ್ರಾಮದ ಚಿಕ್ಕೂಸನಾಯ್ಕ ಬಿನ್ ನಾಗನಾಯ್ಕ (60) ಕಳೆದ ಮೂರು ತಿಂಗಳ ಹಿಂದೆ ಮನೆಯಿಂದ ಕೆಲಸಕ್ಕೆ ತೆರಳಿದ್ದವರು ಇನ್ನೂ ವಾಪಸಾಗಿಲ್ಲ. ಎಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಪತ್ನಿ ನಾಗಮ್ಮ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಶಿವಪುರ ಗ್ರಾಮದ ಪುಟ್ಟಸಿದ್ದಮ್ಮ (70) ಮೈಸೂರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ ಎಂದು ಸೋದರಳಿಯ ಪರಶಿವಶೆಟ್ಟಿ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಪಟ್ಟಣ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಮೂರು ವ್ಯಕ್ತಿಗಳ ಸುಳಿವು ಸಿಕ್ಕಲ್ಲಿ ಪಟ್ಟಣ ಪೊಲೀಸ್ ಠಾಣೆಯ 08229_222228 ಗೆ ಸಂಪರ್ಕಿಸಲು ಕೋರಿದ್ದಾರೆ.