ಭಟ್ಕಳ: ಜು.22ರಂದು ಮತರದಾರರ ಪಟ್ಟಿ ಪರಿಷ್ಕರಣೆ ವಿಶೇಷ ಆಂದೋಲನ
ಭಟ್ಕಳ, ಜು.18: ಮತದಾರರ ಪಟ್ಟಿ ಪರಿಷ್ಕರಣೆ, ವರ್ಗಾವಣೆ, ಹೆಸರು ನೋಂದಣಿ, ತೆಗೆಯುವುದು ಸೇರಿದಂತೆ ಎಲ್ಲಾ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಜು.1ರಿಂದ ಆರಂಭವಾಗಿದ್ದು, ಮತದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಪ್ರಕಣೆಯಲ್ಲಿಕೋರಿದ್ದಾರೆ.
ಈ ಕುರಿತು ಆಯಾಯ ಮತಗಟ್ಟೆ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಲಿದ್ದು, ಮತದಾರರು ಮತಗಟ್ಟೆಗಳಿಗೆ ಭೇಟಿ ನೀಡಿ ಅಗತ್ಯದ ನಮೂನೆಯಲ್ಲಿ ಅರ್ಜಿ ಸಲ್ಲಿಸುವಂತೆಕೋರಿದ್ದಾರೆ. ಜು.22ರಂದು ವಿಶೇಷ ಆಂದೋಲನ ಆಯೋಜಿಸಲಾಗಿದ್ದು, ಅಂದು ಎಲ್ಲಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯತನಕ ಅಧಿಕಾರಿಗಳು ಮತದಾರರಿಂದ ಫಾರ್ಮ ನಂ.6,7,8 ಹಾಗೂ 8ಎ ಗಳನ್ನು ಸ್ವೀಕರಿಸಲಿದ್ದು, ಎಲ್ಲಾ ಮತದಾರರು ಈ ವಿಶೇಷ ಆಂದೋಲನದ ಪ್ರಯೋಜನವನ್ನು ಪಡೆಯಬೇಕು ಎಂದೂ ಕೋರಿದ್ದಾರೆ.
ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಲಿಚ್ಚಿಸುವ 18-21 ವರ್ಷ ವಯಸ್ಸಿನ ಯುವ ಜನತೆ ಜು.31ರ ಒಳಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದೂ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.