ತೀವ್ರ ಜ್ವರಕ್ಕೆ ಬಾಲಕ ಬಲಿ: ಡೆಂಗ್ ಶಂಕೆ
Update: 2017-07-18 21:30 IST
ಮಂಡ್ಯ, ಜು.18: ತೀವ್ರ ಜ್ವರದಿಂದ ಕಳೆದ ಆರು ದಿನಗಳಿಂದ ಬಳಲುತ್ತಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಹೊನಗಳ್ಳಿಮಠ ಗ್ರಾಮದಲ್ಲಿ ನಡೆದಿದೆ.
ಮಮತಾ ಶಿವಾನಂದ ದಂಪತಿ ಪುತ್ರ ಹೇಮಂತ್(7) ಬಾಲಕ ತೀವ್ರ ಜ್ವರದಿಂದ ಮೃತಪಟ್ಟಿದ್ದು, ಡೆಂಗ್ ಜ್ವರದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಆದರೆ, ವೈದ್ಯರು ಇನ್ನೂ ದೃಢಪಡಿಸಲ್ಲ.
ಹನಕೆರೆ ಗ್ರಾಮದ ಎರಡನೇ ತರಗತಿ ಓದುತ್ತಿದ್ದ ಹೇಮಂತ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.