ವಿಷ ಸೇವಿಸಿ ಆತ್ಮಹತ್ಯೆ
ಬಾಗೇಪಲ್ಲಿ, ಜು.19: ಜೀವನದಲ್ಲಿ ಬೇಸತ್ತ ಗೃಹಿಣಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿ ವ್ಯಾಪ್ತಿಯ ಕನ್ನಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿಯನ್ನು ಕನ್ನಂಪಲ್ಲಿ ಗ್ರಾಮದ ರೇಣುಕಾ (32) ಎಂದು ಗುರುತಿಸಲಾಗಿದೆ. ಕನ್ನಂಪಲ್ಲಿ ಗ್ರಾಮದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತಿ ರಾಮಕೃಷ್ಣಪ್ಪನಿಗೆ ಊಟ ನೀಡಿ, ಸಮೀಪವಿರುವ ಹೊಲದ ರೂಂ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಎಷ್ಟೇ ಸಮಯವಾದರೂ ತನ್ನ ಹೆಂಡತಿ ಬಾರದೇ ಇದ್ದಾಗ ಅನುಮಾನಗೊಂಡ ಪತಿ ರೂಂ ಬಳಿ ಹೋದಾಗ ಪತ್ನಿ ವಿಷ ಸೇವಿಸಿ ಒದ್ದಾಡುತ್ತಿರುವುದು ನೋಡಿದ ತಕ್ಷಣವೇ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ಸಾವನ್ನಪ್ಪಿರುವುದಾಗಿ ತಿಳಿದುಬಂದಿರುತ್ತೆ. ಈ ಬಗ್ಗೆ ಮೃತಳ ಸಂಬಂಧಿಕರು ಮಾತನಾಡಿ, ಗಂಡ ಮತ್ತು ಅತ್ತೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ ಎನ್ನಲಾಗಿದೆ. ಪತಿ ರಾಮಕೃಷ್ಣಪ್ಪನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.