ಭಟ್ಕಳ: ಎರಡು ದಿನಗಳ ಮಾರಿ ಉತ್ಸವಕ್ಕೆತೆರೆ
ಭಟ್ಕಳ, ಜು.20: ನಗರದಲ್ಲಿ ನಡೆದ ಎರಡು ದಿನಗಳ ಮಾರಿ ಉತ್ಸವ ಗುರುವಾರದಂದು ಅತ್ಯಂತ ವಿಜೃಂಭಣೆಯಿಂದ ನೂರಾರು ಭಕ್ತರು ಸೇರಿ ಜಾಲಿಕೋಡಿ ಸಮುದ್ರದಲ್ಲಿ ವಿಸರ್ಜನೆಯಾಗುವುದರ ಮೂಲಕ ತೆರೆಕಂಡಿತು.
ವರ್ಷಂಪ್ರತಿ ನಡೆಯುವ ಎರಡು ದಿನಗಳ ಮಾರಿಜಾತ್ರೆ ಮಾರಿ ಮೂರ್ತಿಯನ್ನು ಬುಧವಾರ ಬೆಳಗಿನ ಜಾವ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿ ಪ್ರಥಮ ಪೂಜೆಯನ್ನು ನೆರವೇರಿಸುವ ಮೂಲಕ ಆರಂಭವಾಗಿತ್ತು. ಮಾರಿಕಾಂಬಾದೇವಿಯದರ್ಶನವನ್ನು ಶಾಸಕ ಮಂಕಾಳ ವೈದ್ಯ ಪಡೆದುಕೊಂಡುಪೂಜೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಮಾರಿಕಾಂಭಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಉಪಾಧ್ಯಕ್ಷ ರಘುವೀರ ಬಾಳ್ಗಿ, ಕಾರ್ಯದರ್ಶಿ ಆಸರಕೇರಿ ಶ್ರೀಧರ ನಾಯ್ಕ, ಎನ್.ಡಿ.ಖಾರ್ವಿ, ಈಶ್ವರದೊಡ್ಮನೆ, ಪರಮೇಶ್ವರದೇವಾಡಿಗ, ದಿನೇಶ ನಾಯ್ಕ, ಗೋವಿಂದ ನಾಯ್ಕ, ದೀಪಕ್ ನಾಯ್ಕ, ವೆಂಕಟೇಶ ನಾಯ್ಕ, ಆಸರಕೇರಿ ಕೃಷ್ಣಾ ನಾಯ್ಕ, ನರೇಂದ್ರ ನಾಯಕ, ಮಾದೇವ ಮೊಗೇರ, ಶಂಕರ ಶೆಟ್ಟಿ, ಶ್ರೀಪಾದ ಕಂಚುಗಾರ, ಗುರು ಸಾಣಿಕಟ್ಟೆ, ಗೋಪಾಲ ಕೋಡಿಯಾ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್: ಮಾರಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಪ್ರಯುಕ್ತ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಕಾರವಾರದ ಹೆಚ್ಚುವರಿ ಎಸ್.ಪಿ.ಗೋಪಾಲ ಬ್ಯಾಕೋಡ, ಭಟ್ಕಳ ಡಿ.ವೈ.ಎಸ್.ಪಿ.ಒ.ಎಸ್. ಶಿವಕುಮಾರ್, ಸರ್ಕಲ್‌ಇನ್ಸಪೆಕ್ಟರ್ ಸುರೇಶ ನಾಯಕ, ನಗರಠಾಣೆಯ ಸಬ್‌ಇನ್ಸಪೆಕ್ಟರ್ ಎಚ್.ಬಿ.ಕುಡಗುಂಟಿ, ಅಣ್ಣಪ್ಪ ಮೊಗೇರ, ಪರಮೇಶ್ವರಪ್ಪ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಮೀಸಲು ಪಡೆಯ ಪೊಲೀಸರು, ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ ಪೊಲೀಸರು ಬಂದೋಬಸ್ತ್‌ನಲ್ಲಿ ಭಾಗವಹಿಸಿದ್ದರು.