ರಾಮನಾಥ ಕೋವಿಂದ್ ಆಯ್ಕೆ: ಬಿಜೆಪಿ ಸಂಭ್ರಮಾಚರಣೆ
Update: 2017-07-20 20:38 IST
ಮಡಿಕೇರಿ, ಜು.20: ಭಾರತದ 14ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್ ಆಯ್ಕೆಯಾಗಿರುವುದನ್ನು ಸ್ವಾಗತಿಸಿ ನಗರ ಬಿಜೆಪಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು.
ಸಾರ್ವಜನಿಕರಿಗೆ ಸಿಹಿ ನೀಡಿ ಸಂತೋಷವನ್ನು ಹಂಚಿಕೊಂಡ ಕಾರ್ಯಕರ್ತರು ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು.
ಕೋವಿಂದ್ ಅವರ ಜಯ ದೇಶದ ಏಕತೆಗೆ ಲಭಿಸಿದ ಜಯವೆಂದು ಬಿಜೆಪಿ ನಗರಾಧ್ಯಕ್ಷರಾದ ಮಹೇಶ್ ಜೈನಿ ಅಭಿಪ್ರಾಯಪಟ್ಟರು.
ನಗರಸಭಾ ಉಪಾಧ್ಯಕ್ಷರಾದ ಟಿ.ಎಸ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಎಸ್.ರಮೇಶ್, ಸದಸ್ಯರಾದ ಉಣ್ಣಿಕೃಷ್ಣನ್, ಮಾಜಿ ಸದಸ್ಯರಾದ ರಾಜೇಶ್, ಶಜೀಲ್ ಕೃಷ್ಣನ್, ಬಾಲಕೃಷ್ಣ, ಪ್ರಮುಖರಾದ ಅರುಣ್, ಜಗದೀಶ್, ಪೊನ್ನಪ್ಪ, ಪುಷ್ಪವೇಣಿ ಮತ್ತಿತರರು ಈ ಸಂದರ್ಭ ಹಾಜರಿದ್ದರು.