×
Ad

ರಾಮನಾಥ ಕೋವಿಂದ ರಾಷ್ಟ್ರಪತಿಯಾಗಿ ಆಯ್ಕೆ: ಬಿಜೆಪಿ ವಿಜಯೋತ್ಸವ

Update: 2017-07-20 21:28 IST

ಮುಂಡಗೋಡ, ಜು.20 : ರಾಷ್ಟ್ರಪತಿ ಹುದ್ದೆಗೆ ಎನ್.ಡಿ.ಎ ಒಕ್ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮಾನಾಥ ಕೋವಿಂದ ಜಯಗಳಿಸಿದ್ದು, ಮುಂಡಗೋಡ ಬಿಜೆಪಿ ತಾಲೂಕಾ ಘಟಕ ವಿಜಯೋತ್ಸವವನ್ನು ಪಟ್ಟಣದ ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.

ವಿಜಯೋತ್ಸವದಲ್ಲಿ ಎಸ್.ಸಿ.ಮೋರ್ಚದಾ ಜಿಲ್ಲಾಧ್ಯಕ್ಷರಾದ ಅಶೋಕ ಚಲವಾದಿ. ಎಸ್.ಸಿ.ಮೋರ್ಚಾದ ತಾಲೂಕ ಅಧ್ಯಕ್ಷ ಸುಭಾಷ ಲಮಾಣಿ. ಮುಂಡಗೊಡ ಶಕ್ತಿ ಕೇಂದ್ರದ ಅಧ್ಯಕ್ಷ ವಿನಾಯಕ ರಾಯ್ಕರ. ಬಿ.ಎಂ. ರಾಯ್ಕರ. ಬಸವರಾಜ ಓಸಿಮಠ. ನಾಗಭೂಷಣ ಹಾವಣಗಿ. ಬಾಪುಗೌಡ ಪಾಟೀಲ. ರಾಘವೇಂದ್ರ ಟಪಾಲದವರ, ವಿಠಲ್ ಮಾರನಬೀಡ. ಡಿ.ಜೆ.ಕುಲಕರ್ಣಿ, ಕೆಂಜೋಡಿ ಗಲಬಿಲಿ, ಉಮೇಶ ಗುಡಗೇರಿ, ಅರುಣ ಭಜಂತ್ರಿ, ಶಿವಾನಂದ ಚಲವಾದಿ ಮುಂತಾದ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News