ರೋಹಿತ್‌ಗೆ 1.12, ಅಶ್ವಿನ್‌ಗೆ 1.01 ಕೋ.ರೂ. ಪಾವತಿ

Update: 2017-07-20 18:45 GMT

ಹೊಸದಿಲ್ಲಿ, ಜು.20: ಜೂನ್ ತಿಂಗಳಲ್ಲಿ 25 ಲಕ್ಷ ರೂ.ಗಿಂತ ಹೆಚ್ಚು ವೇತನ ಪಾವತಿಸಿದ ವಿವರವನ್ನು ಬಿಸಿಸಿಐ ಬಹಿರಂಗಪಡಿಸಿದೆ. ಗುತ್ತಿಗೆ ಕ್ರಿಕೆಟಿಗರಿಗೆ ನೀಡಿರುವ ವೇತನ, ರಾಜ್ಯ ಹಾಗೂ ವಿದೇಶಿ ಕ್ರಿಕೆಟ್ ಮಂಡಳಿಗಳು, ಐಪಿಎಲ್ ಫ್ರಾಂಚೈಸಿಗಳು, ಪ್ರಸಾರ ಸಂಸ್ಥೆಗಳು ಸಹಿತ ಇತರರಿಗೆ ನೀಡಿರುವ ಮೊತ್ತದ ವಿವರ ಪಟ್ಟಿಯಲ್ಲಿದೆ.

ಕ್ರಿಕೆಟಿಗರ ಪೈಕಿ ರೋಹಿತ್ ಶರ್ಮ 2015-16ರ ಋತುವಿನಲ್ಲಿ ಅಂದಾಜು 1.12 ಕೋ.ರೂ., ಭಾರತದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ 2017ರ ಎಪ್ರಿಲ್ ತಿಂಗಳ ಶುಲ್ಕ 48 ಲಕ್ಷ ರೂ. ಸ್ವೀಕರಿಸಿದ್ದಾರೆ. ಸ್ಟಾರ್ ಆಫ್-ಸ್ಪಿನ್ನರ್ ಆರ್.ಅಶ್ವಿನ್ 2015-16ರ ಋತುವಿನಲ್ಲಿ ಅಂದಾಜು 1.01 ಕೋ.ರೂ. ಹಾಗೂ ಅಜಿಂಕ್ಯ ರಹಾನೆ ಇದೇ ಅವಧಿಯಲ್ಲಿ 1.10 ಕೋ.ರೂ. ವೇತನ ಸ್ವೀಕರಿಸಿದ್ದಾರೆ.

  ಐಪಿಎಲ್ ತಂಡಗಳ ಪೈಕಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್-10ರ ಎರಡನೆ ಕಂತು 22.86 ಕೋ.ರೂ, ಹಾಗೂ ಪ್ರಶಸ್ತಿ ಜಯಿಸಿದ್ದಕ್ಕೆ 34.29 ಕೋ.ರೂ. ಪಡೆದಿದೆ. 3ನೆ ಸ್ಥಾನ ಪಡೆದಿರುವ ಕೋಲ್ಕತಾ ನೈಟ್ ರೈಡರ್ಸ್ 15.75(ಅಂದಾಜು)ಕೋ.ರೂ.ನೊಂದಿಗೆ ಎರಡನೆ ಕಂತಿನ ಮೊತ್ತ 21 ಕೋ.ರೂ. ಸ್ವೀಕರಿಸಿದೆ.
2016ರ ಐಪಿಎಲ್‌ನಲ್ಲಿ ಆಡಲು ತಮ್ಮ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿರುವ ವಿದೇಶಿ ಕ್ರಿಕೆಟ್ ಸಂಸ್ಥೆಗಳಾದ ಕ್ರಿಕೆಟ್ ಆಸ್ಟ್ರೇಲಿಯ(4.038 ಕೋ.ರೂ.) ಹಾಗೂ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಗೆ(1.36 ಕೋ.ರೂ.) ಹಣ ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News