'ಜಿಯೋ'ದಿಂದ ಉಚಿತ ಫೋನ್ ಘೋಷಣೆ

Update: 2017-07-21 09:39 GMT

ಮುಂಬೈ, ಜು.21: ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಇಂದು ತಮ್ಮ ಬಹುನಿರೀಕ್ಷಿತ ಜಿಯೋ ಫೋನ್ ಬಿಡುಗಡೆಯ ಬಗ್ಗೆ ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ 40ನೇ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದರಲ್ಲದೆ, ಈ ಹೊಚ್ಚ ಹೊಸ ಫೋನ್ ವಸ್ತುಶಃ ಗ್ರಾಹಕರಿಗೆ ಉಚಿತವಾಗಿ ಲಭ್ಯವಾಗಲಿದೆ. ಇದು ಎಲ್ಲಾ ಭಾರತೀಯರಿಗೆ 'ಡಿಜಿಟಲ್ ಸ್ವಾತಂತ್ರ್ಯ' ನೀಡಲಿದೆ ಎಂದಿದ್ದಾರೆ. ಫೋನಿನ ಎಫೆಕ್ಟಿವ್ ದರ ಸೊನ್ನೆ ರೂಪಾಯಿ ಎಂದು ಅವರು ಹೇಳಿದ್ದಾರೆ.

ಈ ಜಿಯೋ ಫೋನ್ ಉಚಿತವಾಗಿ ದೊರೆಯಲಿದೆಯಾದರೂ ಗ್ರಾಹಕರು ಮೂರು ವರ್ಷಗಳ ನಂತರ ಸಂಪೂರ್ಣವಾಗಿ ರಿಫಂಡ್ ಮಾಡಬಹುದಾದ ರೂ.1,500 ಠೇವಣಿಯಿಡಬೇಕು.

ಅಷ್ಟೇ ಅಲ್ಲ ಜಿಯೋ ಫೋನ್ ಬಳಕೆದಾರರಿಗೆ ತಿಂಗಳಿಗೆ ರೂ.153 ಪಾವತಿಸಿದರೆ ಅನಿಯಮಿತ 4ಜಿ ಡಾಟಾ ಲಭ್ಯವಾಗಲಿದ್ದು. ಎಲ್ಲಾ ವಾಯ್ಸ್ ಕರೆಗಳು ಹಾಗೂ ಎಸ್ಸೆಮ್ಮೆಸ್ ಉಚಿತವಾಗಲಿದೆ.

ಆಗಸ್ಟ್ 15ರಿಂದ ಟೆಸ್ಟಿಂಗ್ ಆರಂಭವಾಗಲಿದ್ದು, ಫೋನಿನ ಮುಂಗಡ ಬುಕ್ಕಿಂಗ್ ಆಗಸ್ಟ್ 24ರಿಂದ ಆರಂಭಗೊಳ್ಳಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದಲ್ಲಿ ಫೋನ್ ಲಭ್ಯವಾಗಲಿದೆ. ಜಿಯೋ ಪ್ರತಿ ವಾರ 50 ಲಕ್ಷ ಫೀಚರ್ ಫೋನುಗಳನ್ನು ಲಭ್ಯಗೊಳಿಸುವ ಉದೇಶ ಹೊಂದಿದೆ ಎಂದು ಅಂಬಾನಿ ಹೇಳಿದ್ದಾರೆ.

ಈ ಫೋನಿನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇದ್ದು ವಾಯ್ಸ್ ಕಮಾಂಡ್ ಅನ್ನು ಅರ್ಥೈಸುವುದಲ್ಲದೆ, 22 ಭಾರತೀಯ ಭಾಷೆಗಳನ್ನೂ ಅದು ಗುರುತಿಸುತ್ತದೆ.
ಮೇಲಾಗಿ ಈ ಫೋನ್ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಮೂವೀಸ್ ಮತ್ತಿತರ ಸವಲತ್ತುಗಳು ದೊರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News