×
Ad

ಅಕ್ರಮ ಮರ ಸಾಗಾಟ: ಲಾರಿ ವಶ

Update: 2017-07-21 18:43 IST

ಗುಂಡ್ಲುಪೇಟೆ, ಜು.21 : ಪರವಾನಗಿಯಿಲ್ಲದೆ ನೀಲಗಿರಿ ಮರಗಳನ್ನು ಅಕ್ರಮವಾಗಿ  ಸಾಗಾಣೆ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಮರಗಳನ್ನು ಯಾವುದೇ ಪರವಾನಗಿ ಮತ್ತು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ತುಮಕೂರಿನಿಂದ ಪಟ್ಟಣದ ಮಾರ್ಗವಾಗಿ ಪಟ್ಟಣದ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಮೂಲಕ ಸಾಗಾಣೆ ಮಾಡುತ್ತಿದ್ದ ಲಾರಿಯನ್ನು ಸಾಮಾಜಿಕ ಅರಣ್ಯ ವಲಯಾರಾಣ್ಯಾಧಿಕಾರಿ ಮುಕುಂದ ಲಾರಿಯ ದಾಖಲೆಗಳನ್ನು ಪರಿಶೀಲಿಸಿದಾಗ ಸಾಗಾಣಿಕೆಗೆ ಯಾವುದೆ ಪರವಾನಗಿ ಮತ್ತು ಅರಣ್ಯ ಇಲಾಖೆ ಅನುಮತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ವೃಕ್ಷ ಸಂರಕ್ಷಣಾ ಕಾಯ್ದೆಯಂತೆ ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News