ಅನಾಮಿಕ ಕರೆಗೆ ಬ್ಯಾಂಕ್ ಮಾಹಿತಿ ನೀಡಬೇಡಿ

Update: 2017-07-21 14:13 GMT

ಮಡಿಕೇರಿ, ಜು.21: ಜಿಲ್ಲೆಯಲ್ಲಿ ಅನಾಮಿಕ ದೂರವಾಣಿ ಕರೆಗಳು ಬ್ಯಾಂಕ್ ಖಾತೆಯ ಮಾಹಿತಿಯನ್ನು ಪಡೆದು ಗ್ರಾಹಕರನ್ನು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಜನರು ಜಾಗೃತರಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.  

ಅಪರಿಚಿತರು ಕರೆ ಮಾಡಿ ನಾವು ಬ್ಯಾಂಕ್‌ನಿಂದ ಮಾತನಾಡುತ್ತಿದ್ದು, ನಿಮ್ಮ ಖಾತೆ ಸಂಖ್ಯೆ, ಎಟಿಎಂ ಸಂಖ್ಯೆ ಬ್ಲಾಕ್ ಆಗಿದೆ, ಈ ಸಂಖ್ಯೆಗಳ ಮಾಹಿತಿ ನೀಡಿ ಎಂದು ನಂಬಿಸುತ್ತಿದ್ದಾರೆ. ಈ ರೀತಿಯಾಗಿ ಬಂದ ಕರೆಗೆ ಬ್ಯಾಂಕ್ ಮಾಹಿತಿಯನ್ನು ನೀಡಿ ಹಣ ಕಳೆದುಕೊಂಡ ಗ್ರಾಹಕರೊಬ್ಬರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನಾಮಿಕ ಕರೆಗಳ ದುಷ್ಕರ್ಮಿಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಸಾರ್ವಜನಿಕರು ಜಾಗೃತರಾಗಬೇಕು ಮತ್ತು ಬ್ಯಾಂಕ್ ಖಾತೆಯ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬಾರದೆಂದು ಎಸ್‌ಪಿ ರಾಜೇಂದ್ರಪ್ರಸಾದ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News