ರೌಡಿ ಚಟುವಟಿಕೆ ನಿಗ್ರಹಕ್ಕೆ ಕ್ರಮ: ಎಸ್ಪಿ ರಾಧಿಕಾ
Update: 2017-07-21 20:17 IST
ಮದ್ದೂರು, ಜು.21: ಪಟ್ಟಣದಲ್ಲಿ ಈಚೆಗೆ ರೌಡಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ಶುಕ್ರವಾರ ಪಟ್ಟಣ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಶಾಂತಿ ಸುವ್ಯವಸ್ಥೆಗಾಗಿ ಸುಧಾರಿತ ಗಸ್ತು ಆಯೋಜಿಸಲಾಗುತ್ತಿದೆ. ಮರಳು ದಂಧೆ ತಡೆಗಟ್ಟುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆದ್ದಾರಿ ಸಂಚಾರ ಒತ್ತಡ ನಿವಾರಣೆಗೆ ವಾರಾಂತ್ಯದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲು ಸೂಚನೆ ನೀಡಿದ್ದೇನೆ. ಕೊಪ್ಪ, ಟಿಬಿ ವೃತ್ತದಲ್ಲಿ ಬೆಳಗ್ಗೆ ಸಂಜೆ ಪೊಲೀಸರ ಜತೆ ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಅವರು ಹೇಳಿದರು. ಡಿವೈಎಸ್‌ಪಿ ಸಿ.ಮಲ್ಲಿಕ್, ಸಿಪಿಐ ಕೆ.ಪ್ರಭಾಕರ್, ಪಿಎಸ್‌ಐಗಳಾದ ಕುಮಾರ್, ಸಂತೋಷ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.