×
Ad

ಭೂಮಿಯನ್ನು ರಕ್ಷಿಸಿ ಮರಗಿಡಗಳನ್ನು ಬೆಳಸಿ: ನ್ಯಾ.ಈರನಗೌಡ ಕಬ್ಬೂರ ಕರೆ

Update: 2017-07-21 21:05 IST

ಮುಂಡಗೋಡ,ಜು.21: ಭೂಮಿಯನ್ನು ರಕ್ಷಿಸಿ ಮರಗಿಡಗಳನ್ನು ಬೆಳಸಿ ಪರಿಸರ ಅಸಮತೋಲನವಾಗುವುದನ್ನು ತಡೆದು ಭೂಮಿಯು ಋತುಮಾನಗಳ ತಕ್ಕಂತೆ ನಡೆಯುವಂತೆ ಮಾಡುವುದು ಎಲ್ಲರ ಕರ್ತವ್ಯ ಎಂದು ತಾಲೂಕ್ ಜೆಎಮ್‌ಎಫ್‌ಸಿ ನ್ಯಾಯಾಧೀಶ ಈರನಗೌಡ ಕಬ್ಬೂರ ಹೇಳಿದರು.

ಅವರು ಬುಧವಾರ ರೋಟರಿಕ್ಲಬ್ ಹೆರಿಟೇಜ ಮುಂಡಗೋಡ, ವಕೀಲರ ಸಂಘ ಮುಂಡಗೋಡ ಹಾಗೂ ತಾಲೂಕ ಕಾನೂನ ಸೇವಾಸಮಿತಿ ಮುಂಡಗೋಡ ಇದರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಹಮ್ಮಿಕೊಂಡ ವನಮೋತ್ಸವ ಕಾರ್ಯಕ್ರಮದಲ್ಲಿ ಶಾಲೆ ಆವರಣದಲ್ಲಿ ಸಸಿ ನೆಟ್ಟು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಮಳೆ ಬೆಳೆ ಸರಿಯಾಗಿ ಬರದೇ ಇರುವುದಕ್ಕೆ ಮರಗಳ ಕಡಿತವೇ ಮುಖ್ಯಕಾರಣ. ತಮ್ಮ ಲಾಭ ಉದ್ದೇಶಕ್ಕಾಗಿ ಕೆಲವರು ಅದನ್ನು ನಾಶಪಡಿಸುತ್ತಾ ಸಾಗಿದ್ದಾರೆ. ಇದರಿಂದ ಮುಂದಿನ ತಲೆಮಾರಿಗೆ, ತಮ್ಮ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ಅವರು ಮರೆತಂತಿದೆ ಎಂದ ಅವರು, ಪರಿಸರವನ್ನು ಪೋಷಿಸಬೇಕು, ನಿಸರ್ಗದ ಲೂಟಿ ನಿಲ್ಲಬೇಕು, ಪ್ರತಿಯೊಬ್ಬರು ಭೂಮಿ ಮೇಲೆ ಅತ್ಯಾಚಾರವಾಗುವುದನ್ನು ತಡೆಯಬೇಕು. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ನಿಲ್ಲಬೇಕು. ನ್ಯಾಯ ಎಲ್ಲರಿಗೂ ಸೀಗಬೇಕು,  ಬಡವರಿಗಾಗಿ ತಾಲೂಕ್ ಕಾನೂನು ಸೇವಾಸಮಿತಿಯ ಉಪಯೋಗ ತೆಗೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಸೀತಾರಾಮ ಬೋರ್ಕರ, ಸಹಾಯಕ ಅಭಿಯೋಜಕ ಎಮ್.ಎಚ್.ನಾಯಕ್, ರೋ.ಪಿ.ಪಿ.ಛಬ್ಬಿ, ಹಿರಿಯ ವಕೀಲ ಕೆ.ಎನ್.ಹೆಗಡೆ. ಪಿ.ಎಸ್.ಆಯ್ ಎಲ್.ಎಮ್.ನಾಯಕ್, ವಕೀಲರಾದ ಮಹ್ಮದ್ ಸಲೀಂ ನಂದಿಗಟ್ಟಿ, ಮಾದರಿ ಶಾಲೆ ಮುಖ್ಯಶಿಕ್ಷಕ ವಿನೋಧ ನಾಯಕ್ ಸೇರಿದಂತೆ ರೋಟರಿ ಕ್ಲಬ್ ಸದಸ್ಯರು, ವಕೀಲರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News