ಪ್ರಧಾನಿ, ವಿತ್ತ ಸಚಿವರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಕಳುಹಿಸಲು ಯತ್ನಿಸಿದ ಪ್ರತಿಭಟನಾಕಾರರು

Update: 2017-07-22 08:29 GMT

ಕೊಯಂಬತ್ತೂರು, ಜು.22: ಸ್ಯಾನಿಟರಿ ನ್ಯಾಪ್‌ಕಿನ್ ಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ವಿಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಇಲ್ಲಿ ಪ್ರತಿಭಟನೆ ನಡೆಸಿದ ರಿವೊಲ್ಯುಷನರಿ ಯೂತ್ ಫ್ರಂಟ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಸ್ಯಾನಿಟರಿ ನ್ಯಾಪ್ ಕಿನ್ ಗಳ ಪಾರ್ಸೆಲ್ ಕಳುಹಿಸಿ ತಮ್ಮ ವಿರೋಧ ವ್ಯಕ್ತಪಡಿಸುವ ಯತ್ನವನ್ನೂ ಮಾಡಿದರು.

ಈ ಹಿಂದೆ ಸ್ಯಾನಿಟರಿ ನ್ಯಾಪ್‌ಕಿನ್ ಗಳ ಮೇಲೆ ಶೇ.5 ತೆರಿಗೆ ವಿಧಿಸಲಾಗುತ್ತಿದ್ದರೆ ಈಗ ಸರಕಾರ ಅದನ್ನು ಶೇ.12ಕ್ಕೆ ಏರಿಸಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ವಾದಿಸಿದರು.

ಸ್ಯಾನಿಟರಿ ನ್ಯಾಪ್ ಕಿನ್‌ಗಳ ಮೇಲೆ ಅಧಿಕ ಜಿಎಸ್‌ಟಿ ವಿಧಿಸಿ ಸರಕಾರ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಪ್ರತಿಭಟನಾಕಾರರಲ್ಲೊಬ್ಬರು ಆರೋಪಿಸಿರು.
  ನ್ಯಾಪ್ ಕಿನ್ ಗಳ ಮೇಲೆ ವಿಧಿಸಲಾಗಿರುವ ಶೇ.12 ಜಿಎಸ್‌ಟಿ ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ನವೆಂಬರ್ 15ರೊಳಗಾಗಿ ವಿವರಣೆ ನೀಡುವಂತೆ ದಿಲ್ಲಿ ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ.

ಸ್ಯಾನಿಟರಿ ಪ್ಯಾಡ್ ಗಳನ್ನು ಉಚಿತವಾಗಿ ಇಲ್ಲವೇ ಸಬ್ಸಿಡಿಯುಕ್ತ ದರಗಳಲ್ಲಿ ನೀಡುವಂತೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಇನ್ನೊಂದು ಪಿಐಎಲ್ ಅನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ದಿಲ್ಲಿ ಹೈಕೋಟ್ ದಿಲ್ಲಿ ಸರಕಾರ, ದಿಲ್ಲಿ ಮುನಿಸಿಪಲ್ ಕೌನ್ಸಿಲ್ ಹಾಗೂ ಮುನಿಸಿಪಲ್ ಕಾರ್ಪೊರೇಶನ್ ಆಫ್ ದಿಲ್ಲಿಗೆ ನೋಟಿಸ್ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News